ಮಂಗಳವಾರ, ನವೆಂಬರ್ 12, 2019
28 °C

ಯಳವಂತಗಿ: ಸಿದ್ಧಾರೂಢರ ಜಾತ್ರಾ ಮಹೋತ್ಸವ ನಾಳೆಯಿಂದ

Published:
Updated:

ಕಲಬುರ್ಗಿ: ತಾಲ್ಲೂಕಿನ ಯಳವಂತಗಿ (ಕೆ) ಗ್ರಾಮದಲ್ಲಿ ಇದೇ 9ರಂದು 11ರವರೆಗೆ ಸಿದ್ಧಾರೂಢ ಸ್ವಾಮಿಗಳ 38ನೇ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. 

ಮೂರು ದಿನಗಳವರೆಗೆ ಜಾತ್ರಾ ಮಹೋತ್ಸವವು ಬೀದರ್‌ ಚಿದಂಬರ ಆಶ್ರಮದ ಡಾ.ಶಿವಕುಮಾರ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ನಗರದ ಸಿದ್ಧಾರೂಢ ಮಠದ ಲಕ್ಷ್ಮಿದೇವಿ ತಾಯಿಯವರು, ಯಳವಂತಗಿಯ ಆನಂದಮಯಿ ತಾಯಿ, ಕೋಟನೂರ (ಡಿ)ನ ಜ್ಞಾನಯೋಗ ಪೀಠದ ಶ್ರದ್ಧಾನಂದ ಸ್ವಾಮೀಜಿ, ಬೀದರ್‌ ಗುರುದೇವಾಶ್ರಮದ ಗಣೇಶಾನಂದ ಮಹಾರಾಜರು, ಆಳೂರ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ, ಸೊಲ್ಲಾಪುರದ ಓಂಕಾರ ಆಶ್ರಮದ ಸುಶಾಂತಾ ತಾಯಿ, ಶಂಕರೆಮ್ಮ ತಾಯಿ, ನೀಲಾಂಬಿಕಾ ತಾಯಿ, ಕಲ್ಲಹಂಗರಗಾದ ಗೋಪಾಲರಾವ ಶಾಸ್ತ್ರಿ ಅವರು ಭಾಗವಹಿಸಲಿದ್ದು, ಸಿದ್ಧಾರೂಢ ಸ್ವಾಮಿಗಳ ಕಥಾಮೃತದ ಪಾರಾಯಣವನ್ನು ಷಣ್ಮುಖ ಬಿರಾದಾರ ನಡೆಸಿಕೊಡಲಿದ್ದರೆ. ಮೂರು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ 11ರವರೆಗೆ ಮತ್ತು ರಾತ್ರಿ 8ರಿಂದ 10ರವರೆಗೆ ವಿವಿಧ ವಿಷಯಗಳ ಕುರಿತು ಪ್ರವಚನ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದೆ.

ನ 11ರಂದು ಸಿದ್ಧಾರೂಢರ ಉತ್ಸವ ಮೂರ್ತಿ ತುಲಾಭಾರ ನಡೆಯಲಿದೆ ಎಂದು ವೀರಣ್ಣಗೌಡ ಹಿರೇಗೌಡ ತಿಳಿಸಿದ್ದಾರೆ. ಗ್ರಾಮಕ್ಕೆ ಪ್ರತಿದಿನ ಬೆಳಿಗ್ಗೆ 7, 9, ಮಧ್ಯಾಹ್ನ 2.30 ಹಾಗೂ ಸಂಜೆ 5 ಹಾಗೂ ರಾತ್ರಿ 8ಕ್ಕೆ ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ನಿಂದ ಬಸ್‌ ಸೌಕರ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)