ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ.20ರಂದು ಬೃಹತ್‌ ಯೋಗ ಸಂಗಮ

ರಾಷ್ಟ್ರೀಯ ಆರೋಗ್ಯ ಮತ್ತು ಭಾವೈಕ್ಯದ ಅರಿವು ಮೂಡಿಸಲು ಪಥಸಂಚಲನ
Last Updated 24 ಮೇ 2022, 4:11 IST
ಅಕ್ಷರ ಗಾತ್ರ

ಕಲಬುರಗಿ: ರಾಷ್ಟ್ರೀಯ ಆರೋಗ್ಯ ಮತ್ತು ಭಾವೈಕ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜೂನ್ 20ರಂದು ‘ಯೋಗ ಸಂಗಮ’ ಪಥಸಂಚಲನ ಹಾಗೂ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದು ಯೋಗ ಸಂಗಮದ ಸಂಚಾಲಕ ಚಂದ್ರಕಾಂತ ಬಿರಾದಾರ ತಿಳಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 5000 ಜನರಿಂದ ಪಥ ಸಂಚಲನ ಹಾಗೂ 200 ಜನರಿಂದ ಸೈಕಲ್‌ ಜಾಥಾ ನಡೆಯಲಿದೆ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 6 ಗಂಟೆಗೆನಗರದ ಶರಣಬಸವೇಶ್ವರ ದೇವಾಲಯ ಆವರಣದಲ್ಲಿ ಪಥಸಂಚಲನಕ್ಕೆ ಶರಣಬಸವೇಶ್ವರ ಸಂಸ್ಥಾನದ ಚೇರ್‌ಪರ್ಸನ್‌ ದಾಕ್ಷಾಯಿಣಿ ಎಸ್‌. ಅಪ್ಪ ಚಾಲನೆ ನೀಡುವರು. ಅಲ್ಲಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಮೂಲಕ ಹಾದು, ಜಿಲ್ಲಾಧಿಕಾರಿ ಕಚೇರಿಗೆ ಬಂದು ಸಮಾಪನಗೊಳ್ಳಲಿದೆ ಎಂದರು.

ಪಾಲ್ಗೊಳ್ಳುವವರಿಗಾಗಿ 10 ದಿನಗಳ ಉಚಿತ ಯೋಗ ತರಬೇತಿ ಆಯೋಜಿಸಲಾಗಿದೆ. ಆಸಕ್ತರು ಉಚಿತವಾಗಿ ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದುಯೋಗ ಸಂಗಮದ ಸಂಚಾಲಕ ಶಿವಾನಂದ ಸಾಲಿಮಠ
ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಹಿಂಗುಲಾಂಬಿಕಾ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ್‌ ಸೇರಿದಂತೆ 21 ಸಂಘಟನೆಗಳ ಸಹಯೋಗದಲ್ಲಿ ಇದು ನಡೆಯಲಿದೆ ಎಂದರು.

ವಿಶ್ವ ಯೋಗ ದಿನಾಚರಣೆ (ಜೂನ್‌ 21) ಈಗ ಹೆಚ್ಚು ಮಹತ್ವ ಬಂದಿದೆ. ಸೀಮಾತೀತವಾಗಿ, ಧರ್ಮಾತೀತವಾಗಿ ಯೋಗ ಕಲಿಯಲು ಜನ ಮುಂದೆ ಬರುತ್ತಿದ್ದಾರೆ. ಆದರೆ, ಬಹಳಷ್ಟು ಜನ ಕಲಿತ ಮೇಲೆ ರೂಢಿಸಿಕೊಳ್ಳುವುದಿಲ್ಲ. ಅದನ್ನು ದೈನಂದಿನ ರೂಢಿ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ತರಬೇತಿ ಮುಖ್ಯ ಎಂದು ಹಿರಿಯ ಯೋಗಪಟು ಎಚ್‌.ಸುಭಾಶ್ಚಂದ್ರ ಅವರು
ತಿಳಿಸಿದರು.

ಈವರೆಗೆ 3 ಸಾವಿರ ಜನರಿಗೆ ಉಚಿತ ತರಬೇತಿ ನೀಡಲಾಗಿದೆ. ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಕೂಡ ನೀಡಲಾಗುವುದು ಎಂದು ಯೋಗಪಟು ಪ್ರತಿಭಾ ತಿಳಿಸಿದರು.

ಹೆಚ್ಚಿನ ಮಾಹಿತಿಗೆ: 9886955340, 9482455038, 9008100878.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT