ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ವೀರಾಗ್ರಣಿ ಪ್ರಶಸ್ತಿ

ಮೂರು ದಿನಗಳ ಯುವಜನೋತ್ಸವ ಕಲರವಕ್ಕೆ ಅದ್ಧೂರಿ ತೆರೆ
Last Updated 9 ನವೆಂಬರ್ 2019, 10:02 IST
ಅಕ್ಷರ ಗಾತ್ರ

ಕಲಬುರ್ಗಿ: ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಕ್ಯಾಂಪಸ್‌ನ ವಿದ್ಯಾರ್ಥಿಗಳು ಅಂತರ ಕಾಲೇಜು ಯುವಜನೋತ್ಸವದಲ್ಲಿ ವೀರಾಗ್ರಣಿ ಪ್ರಶಸ್ತಿಯನ್ನು ಹೆಮ್ಮೆಯಿಂದ ಎತ್ತಿ ಹಿಡಿದರು. ನಗರದ ರೇಷ್ಮಿ ಶೈಕ್ಷಣಿಕ ಮತ್ತು ಚಾರಿಟಬಲ್‌ ಟ್ರಸ್ಟ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಮೂರು ದಿನಗಳವರೆಗೆ ನಡೆದ ಯುವಜನೋತ್ಸವದಲ್ಲಿ ಬೀದರ್‌, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭೆಯ ಮಿಂಚು ಹರಿಸಿದರು.

ಫಲಿತಾಂಶದ ವಿವರ: ಕ್ಲಾಸಿಕಲ್‌ ವೋಕಲ್‌ ಸೋಲೊ (ಹಿಂದುಸ್ತಾನಿ, ಕರ್ನಾಟಕ) ಗುಲಬರ್ಗಾ ವಿ.ವಿ.ಯ ಹರಿಪ್ರಿಯಾ (ಪ್ರಥಮ); ಕಲಬುರ್ಗಿಎಸ್‌.ಬಿ. ವಿಜ್ಞಾನ ಕಾಲೇಜಿನ ಉಷಾರಾಣಿ (ದ್ವಿತೀಯ); ಕಲಬುರ್ಗಿಯ ಡಾ.ಅಂಬೇಡ್ಕರ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪೂಜಾ (ತೃತೀಯ).

ಕ್ಲಾಸಿಕಲ್‌ ಇನ್‌ಸ್ಟ್ರುಮೆಂಟಲ್‌ ಸೋಲೊ (ಪರ್ಕಶನ್‌) : ಗು.ವಿ.ವಿ.ಯ ಕಾಶಿನಾಥ (ಪ್ರಥಮ); ರೇಷ್ಮಿ ಕಾಲೇಜಿನ ಮಲ್ಲಿಕಾರ್ಜುನ ಎಲ್‌ (ದ್ವಿತೀಯ); ಶಹಾಬಾದ್‌ನ ಎಸ್‌.ಎಸ್‌.ಮುರಗೋಳ ಕಲಾ ಕಾಲೇಜಿನ ನಾಗರಾಜ ಮಾನಯ್ಯ (ತೃತೀಯ).

ಕ್ಲಾಸಿಕಲ್ ಇನ್‌ಸ್ಟ್ರುಮೆಂಟಲ್‌ ಸೋಲೊ (ನಾನ್‌ ಪರ್ಕಶನ್‌): ಲಿಂಗಸುಗೂರಿನ ಎಸ್‌ಎಂಎಲ್‌ಬಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪೂರ್ಣಿಮಾ (ಪ್ರಥಮ); ಗುವಿವಿಯ ಕಾಶಿನಾಥ (ದ್ವಿತೀಯ); ಎಸ್‌.ಬಿ. ವಿಜ್ಞಾನ ಕಾಲೇಜಿನ ಉಷಾರಾಣಿ.

ಲೈಟ್‌ ವೋಕಲ್‌ ಸೋಲೊ: ರಾಯಚೂರಿನ ಎಲ್‌ವಿಡಿ ಕಾಲೇಜಿನ ಸಂಗೀತಾ ಕಲಬುರ್ಗಿ; ಎಸ್‌ಎಂಎಲ್‌ಬಿ ಕಾಲೇಜಿನ ಹರಿಣಿ (ದ್ವಿತೀಯ); ಗುವಿವಿಯ ಹರಿಪ್ರಿಯಾ.

ವೆಸ್ಟರ್ಟ್‌ ವೋಕಲ್‌ ಸೋಲೊ: ಗುವಿವಿಯ ಅಯೋಡಿ ಐಶ್ವರ್ಯ (ಪ್ರಥಮ); ರೇಷ್ಮಿ ಕಾಲೇಜಿನ ರಾಕೇಶ್‌ (ದ್ವಿತೀಯ); ಡಾ.ಅಂಬೇಡ್ಕರ್‌ ಕಾಲೇಜಿನ ಜಾನಕಿ (ತೃತೀಯ).

ಸಮೂಹ ಗಾಯನ (ಭಾರತೀಯ): ಗುವಿವಿಯ ಸ್ವಾತಿ ಮತ್ತು ತಂಡ (ಪ್ರಥಮ); ರಾಯಚೂರು ಎಲ್‌ವಿಡಿ ಕಾಲೇಜಿನ ಸಂಗೀತಾ ಕಲಬುರ್ಗಿ ಮತ್ತು ತಂಡ (ದ್ವಿತೀಯ); ಎಸ್‌.ಬಿ. ವಿಜ್ಞಾನ ಕಾಲೇಜಿನ ಉಷಾರಾಣಿ ಮತ್ತು ತಂಡ (ತೃತೀಯ).

ಸಮೂಹ ಗಾಯನ (ಪಾಶ್ಚಿಮಾತ್ಯ): ಗುವಿವಿಯ ಸ್ವಾತಿ ಜೋಶಿ ಮತ್ತು ತಂಡ (ಪ್ರಥಮ); ಎಸ್‌.ಬಿ. ಕಲಾ ಕಾಲೇಜಿನ ಚೇತನ್‌ ಬಿ. ಕೋಬಾಳ್ ಮತ್ತು ತಂಡ (ದ್ವಿತೀಯ); ರಾಯಚೂರು ಎಲ್‌ವಿಡಿ ಕಾಲೇಜಿನ ಸಂಗೀತಾ ಕುಲಕರ್ಣಿ ಮತ್ತು ತಂಡ.

ಜಾನಪದ ವಾದ್ಯ: ರೇಷ್ಮಿ ಕಾಲೇಜಿನ ಸಮೀರ್‌ ಆರ್‌. ಸುಬೇದಾರ್‌ ಮತ್ತು ತಂಡ (ಪ್ರಥಮ); ಡಾ.ಅಂಬೇಡ್ಕರ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸ್ವಾತಿ ಮತ್ತು ತಂಡ (ದ್ವಿತೀಯ); ಎಸ್‌.ಬಿ. ಕಲಾ ಕಾಲೇಜಿನ ಯಲ್ಲಾಲಿಂಗ ಮತ್ತು ತಂಡ (ತೃತೀಯ).

ವೆಸ್ಟರ್ನ್‌ ಇನ್‌ಸ್ಟ್ರುಮೆಂಟಲ್‌ ಸೋಲೊ: ಗುವಿವಿಯ ಸುಮಾ (ಪ್ರಥಮ); ರೇಷ್ಮಿ ಕಾಲೇಜಿನ ಸಮೀರ್‌ ಆರ್‌. ಸುಬೇದಾರ್‌ (ದ್ವಿತೀಯ).

ಜಾನಪದ, ಬುಡಕಟ್ಟು ನೃತ್ಯ: ಡಾ.ಅಂಬೇಡ್ಕರ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಘವೇಂದ್ರ ಮತ್ತು ತಂಡ (ಪ್ರಥಮ); ಗುವಿವಿಯ ದೀಕ್ಷಾ ಮತ್ತು ತಂಡ (ದ್ವಿತೀಯ); ಎಸ್‌.ಬಿ.ವಿಜ್ಞಾನ ಕಾಲೇಜಿನ ಅರ್ಚನಾ ಆರ್‌.ಎಸ್‌. ಮತ್ತು ತಂಡ (ತೃತೀಯ).

ಸಾಂಪ್ರದಾಯಿಕ ನೃತ್ಯ: ಗುವಿವಿಯ ದೀಕ್ಷಾ (ಪ್ರಥಮ); ರೇಷ್ಮಿ ಕಾಲೇಜಿನ ಪಲ್ಲವಿ ಜೆ.ಶಿಂಧೆ (ದ್ವಿತೀಯ); ಎಸ್‌.ಬಿ. ಕಲಾ ಕಾಲೇಜಿನ ಕಾವ್ಯಾ ಸಂಗಪ್ಪ (ತೃತೀಯ).

ಕ್ವಿಜ್‌: ಗುವಿವಿಯ ಮಂಜುನಾಥ ಮತ್ತು ತಂಡ (ಪ್ರಥಮ); ಅಫಜಲಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಸಿಫ್‌ ಎಂ.ಪಿಂಜಾರ (ದ್ವಿತೀಯ); ಎಸ್‌.ಬಿ. ವಿಜ್ಞಾನ ಕಾಲೇಜಿನ ಅನ್ನಪೂರ್ಣ ಟಕ್ಕಳಕಿ (ತೃತೀಯ).

ಭಾಷಣ ಸ್ಪರ್ಧೆ: ಕಲಬುರ್ಗಿಯ ವಿಶ್ವನಾಥರೆಡ್ಡಿ ಮುದ್ನಾಳ ವಾಣಿಜ್ಯ ಕಾಲೇಜಿನ ಶ್ರುತಿ ಶ್ರೀಮಂತ ಪರೀಟ (ಪ್ರಥಮ); ರಾಯಚೂರಿನ ಎಕ್ಸಲೆಂಟ್‌ ಪದವಿ ಕಾಲೇಜಿನ ಸಮೀರ್‌ ವಿ.ಡಿ. (ದ್ವಿತೀಯ); ನೌಬಾದ್‌ ಬೀದರ್‌ನ ಯಲ್ಲಾಲಿಂಗ ಬಿ.ಇಡಿ. ಕಾಲೇಜಿನ ಜಗದೀಶ ಆರ್. (ತೃತೀಯ).

ಚರ್ಚಾ ಸ್ಪರ್ಧೆ: ಎಸ್‌.ಬಿ. ವಿಜ್ಞಾನ ಕಾಲೇಜಿನ ಚಿಂತನ್ ಬಿ, ಅನ್ನಪೂರ್ಣಾ ಟಕ್ಕಳಕಿ (ಪ್ರಥಮ); ಗುವಿವಿಯ ಪ್ರದ್ಯುಮ್ನ, ಗುರುರಾಜ ಚವಾಣ್ (ದ್ವಿತೀಯ); ರೇಷ್ಮಿ ಕಾಲೇಜಿನ ಪಲ್ಲವಿ ಜೆ. ಶಿಂಧೆ, ಐಶ್ವರ್ಯ ಹೂಗಾರ (ತೃತೀಯ).

ಏಕಾಂಕ ನಾಟಕ: ರೇಷ್ಮಿ ಕಾಲೇಜಿನ ಸಮೀರ್‌ ಆರ್‌. ಸುಬೇದಾರ್‌ ಮತ್ತು ತಂಡ (ಪ್ರಥಮ); ಎಸ್‌.ಬಿ. ವಿಜ್ಞಾನ ಕಾಲೇಜಿನ ಕಿರಣಕುಮಾರ್‌ ವೈ ಹಾಗೂ ತಂಡ (ದ್ವಿತೀಯ); ಶಹಾಬಾದ್‌ ಬಂಕೂರಿನ ಕರ್ನಾಟಕ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ಅಂಬರೇಶ ಶ್ರೀಶೈಲ (ತೃತೀಯ).

ಸ್ಕಿಟ್‌: ರೇಷ್ಮಿ ಕಾಲೇಜಿನ ಸಮೀರ್‌ ಆರ್‌. ಸುಬೇದಾರ್‌ (‍ಪ್ರಥಮ); ಡಾ.ಅಂಬೇಡ್ಕರ್‌ ಕಲಾ, ವಾಣಿಜ್ಯ ಕಾಲೇಜಿನ ಪೂಜಾ ಬಡಿಗೇರ ಮತ್ತು ತಂಡ (ದ್ವಿತೀಯ); ಎಸ್‌.ಬಿ. ಕಲಾ ಕಾಲೇಜಿನ ಮಲ್ಲಪ್ಪ ಮತ್ತು ತಂಡ (ತೃತೀಯ).

ಮೈಮ್‌: ಎಸ್‌.ಬಿ. ಕಲಾ ಕಾಲೇಜಿನ ಮಾಳಪ್ಪ ಮತ್ತು ತಂಡ (ಪ್ರಥಮ); ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮಾರ್ತಾ ಮತ್ತು ತಂಡ (ದ್ವಿತೀಯ); ರೇಷ್ಮಿ ಕಾಲೇಜಿನ ಅಮರೇಗೌಡ ಅಮರಪ್ಪ (ತೃತೀಯ).

ಮಿಮಿಕ್ರಿ: ಗುವಿವಿಯ ಜಲೀಲ್‌ ಪಟೇಲ್‌ (ಪ್ರಥಮ); ರೇಷ್ಮಿ ಕಾಲೇಜಿನ ಮಲ್ಲಿಕಾರ್ಜುನ ಎಲ್‌.ಟಿ. (ದ್ವಿತೀಯ); ಎಸ್‌.ಬಿ. ಕಲಾ ಕಾಲೇಜು (ತೃತೀಯ).

ಸ್ಥಳದಲ್ಲೇ ಚಿತ್ರ ಬಿಡಿಸುವುದು: ಕಲಬುರ್ಗಿಯ ಎಂಎಂಕೆ ವಿಜುವಲ್‌ ಆರ್ಟ್‌ ಕಾಲೇಜಿನ ರುಡಾರಾ ಮಜೀಥಿಯಾ (ಪ್ರಥಮ); ಗುವಿವಿಯ ರಮೇಶ (ದ್ವಿತೀಯ); ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಣಮಂತ ಬಿ. (ತೃತೀಯ).

ಕೊಲಾಜ್‌: ಎಂ.ಎಂ.ಕೆ. ಕಲಾ ಕಾಲೇಜಿನ ವಿಜಯಕುಮಾರ ಶಾಮರಾವ್‌ (ಪ್ರಥಮ); ಗುವಿವಿಯ ಮೀನಾಕ್ಷಿ (ದ್ವಿತೀಯ); ಎಸ್‌.ಬಿ. ಕಲಾ ಕಾಲೇಜಿನ ಕಲ್ಪನಾ ಬಿ. (ತೃತೀಯ).

ಪೋಸ್ಟರ್‌ ಮೇಕಿಂಗ್‌: ಗುವಿವಿಯ ಶ್ವೇತಾ (ಪ್ರಥಮ); ಎಸ್‌.ಬಿ. ಕಲಾ ಕಾಲೇಜಿನ ಸ್ಯಾನಿ ಚವಾಣ್ (ದ್ವಿತೀಯ); ಕಲಬುರ್ಗಿಯ ಎನ್‌.ವಿ. ಶಿಕ್ಷಣ ಮಹಾವಿದ್ಯಾಲಯದ ತೇಜಸ್ವಿನಿ ಮಿಟ್ಟೆ (ತೃತೀಯ).

ಕ್ಲೇ ಮಾಡೆಲಿಂಗ್‌: ಎಂ.ಎಂ.ಕೆ ಕಲಾ ಕಾಲೇಜಿನ ವಿಜಯಕುಮಾರ್ ಶಾಮರಾವ್ (ಪ್ರಥಮ); ಗುವಿವಿಯ ಲೋಹಿತಾಶ್ವಚಾರಿ ಎಂ.ಬಿ. (ದ್ವಿತೀಯ); ಎಸ್‌.ಬಿ. ಕಲಾ ಕಾಲೇಜಿನ ಶ್ರೀನಿವಾಸ್‌ ಕೆ.

ಕಾರ್ಟೂನಿಂಗ್‌: ಎಂ.ಎಂ.ಕೆ. ಕಲಾ ಕಾಲೇಜಿನ ಗೌತಮ ಈರಣ್ಣ (ಪ್ರಥಮ); ಎಸ್‌.ಬಿ. ಕಲಾ ಕಾಲೇಜಿನ ನರಸಿಂಗ ಬಿ. (ದ್ವಿತೀಯ); ಎನ್‌.ವಿ. ಶಿಕ್ಷಣ ಮಹಾವಿದ್ಯಾಲಯದ ತೇಜಸ್ವಿನಿ ಎಂ. (ತೃತೀಯ).

ರಂಗೋಲಿ: ಎಂ.ಎಂ.ಕೆ. ಕಲಾ ಕಾಲೇಜಿನ ಅಂಕಿತಾ ಎಂ.ಕೆ. (ಪ್ರಥಮ); ಗುವಿವಿಯ ಶ್ವೇತಾ (ದ್ವಿತೀಯ); ಶಹಾಬಾದ್‌ನ ಎಸ್‌.ಎಸ್‌.ಮರಗೋಳ ಕಲಾ ಕಾಲೇಜಿನ ಪ್ರೇಮಾ ಕಾಂಬಳೆ (ತೃತೀಯ).

ಇನ್‌ಸ್ಟಾಲೇಶನ್‌: ಗುವಿವಿ ಲೋಹಿತಾಶ್ವಚಾರಿ ಎಂ.ಬಿ. ಮತ್ತು ತಂಡ (ಪ್ರಥಮ); ಎಂ.ಎಂ.ಕೆ. ಕಲಾ ಕಾಲೇಜಿನ ರುದ್ರ ಮಜೀಥಿಯಾ ಮತ್ತು ತಂಡ (ದ್ವಿತೀಯ); ರೇಷ್ಮಿ ಕಾಲೇಜಿನ ಅಮರಗುಂಡ ಮತ್ತು ತಂಡ (ತೃತೀಯ).

ಸ್ಪಾಟ್‌ ಫೋಟೊಗ್ರಫಿ: ಎಂ.ಎಂ.ಕೆ. ಕಲಾ ಕಾಲೇಜಿನ ಆಕಾಶ ಎಸ್. ಝಳಕಿ (ಪ್ರಥಮ); ರೇಷ್ಮಿ ಕಾಲೇಜಿನ ನವೀನ್‌ಕುಮಾರ್‌ ಎಸ್‌ (ದ್ವಿತೀಯ); ಎಸ್‌.ಬಿ. ಕಲಾ ಕಾಲೇಜಿನ ನರಸಿಂಹ ಬಿ. (ತೃತೀಯ).

ಮೆಹಂದಿ: ಗುವಿವಿಯ ಆಯೇಷಾ ಖಾನಂ (ಪ್ರಥಮ); ಎಂ.ಎಂ.ಕೆ. ದೃಶ್ಯ ಕಲಾ ಕಾಲೇಜಿನ ಅಂಕಿತಾ ಎಂ.ಕೆ. (ದ್ವಿತೀಯ), ಎಸ್‌.ಬಿ. ವಿಜ್ಞಾನ ಕಾಲೇಜಿನ ವೈಷ್ಣವಿ ಪಿ. ಕುಲಕರ್ಣಿ (ತೃತೀಯ).

ವಿಭಾಗವಾರು ಪ್ರಶಸ್ತಿ ಹಂಚಿಕೆ

ಸಂಗೀತ ಸ್ಪರ್ಧೆಗಳು: ಗುಲಬರ್ಗಾ ವಿ.ವಿ.–ಪ್ರಥಮ; ರೇಷ್ಮಿ ಕಾಲೇಜು ರನ್ನರ್‌ ಅಪ್‌.

ನೃತ್ಯ ಸ್ಪರ್ಧೆಗಳು: ಗುಲಬರ್ಗಾ ವಿ.ವಿ.–ಪ್ರಥಮ; ಡಾ.ಅಂಬೇಡ್ಕರ್‌ ಕಲಾ ಮತ್ತು ವಾಣಿಜ್ಯ ಕಾಲೇಜು–ರನ್ನರ್‌ ಅಪ್‌.

ಸಾಹಿತ್ಯಿಕ ಸ್ಪರ್ಧೆಗಳು: ಎಸ್‌.ಬಿ. ವಿಜ್ಞಾನ ಕಾಲೇಜು–ಪ್ರಥಮ; ಗುಲಬರ್ಗಾ ವಿ.ವಿ.ಯ ರಾಯಚೂರು ಸ್ನಾತಕೋತ್ತರ ಕೇಂದ್ರ–ರನ್ನರ್‌ ಅಪ್‌

ರಂಗ ಸ್ಪರ್ಧೆಗಳು: ರೇಷ್ಮಿ ಕಾಲೇಜು–ಪ್ರಥಮ; ಎಸ್‌.ಬಿ. ಕಲಾ ಕಾಲೇಜು–ರನ್ನರ್‌ ಅಪ್‌.

ಚಿತ್ರಕಲಾ ಸ್ಪರ್ಧೆಗಳು: ಎಂ.ಎಂ.ಕೆ. ದೃಶ್ಯ ಕಲಾ ಕಾಲೇಜು–ಪ್ರಥಮ; ರೇಷ್ಮಿ ಕಾಲೇಜು–ರನ್ನರ್‌ ಅಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT