ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಭಿವೃದ್ದಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ'

ಅಣ್ಣಿಗೇರಿಯಲ್ಲಿ ನೂತನ ಜೆಡಿಎಸ್ ಕಾರ್ಯಾಲಯ ಉದ್ಘಾಟನೆ
Last Updated 23 ಏಪ್ರಿಲ್ 2018, 8:54 IST
ಅಕ್ಷರ ಗಾತ್ರ

ಅಣ್ಣಿಗೇರಿ: ನವಲಗುಂದ ವಿಧಾನಸಭಾ ಮತಕ್ಷೇತ್ರದ ಹಾಗೂ ರಾಜ್ಯದ ಜನತೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಆಡಳಿತವನ್ನು ನೋಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು ಜನರು ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ತಾಲ್ಲೂಕು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಶೈಲಯ್ಯ ಮೂಲಿಮನಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಕಲಾಲ್ ಬಿಲ್ಡಿಂಗ್‌ನಲ್ಲಿ ಶನಿವಾರ ತಾಲ್ಲೂಕು ಜೆಡಿಎಸ್ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನವಲಗುಂದ ಮತಕ್ಷೇತ್ರದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಶಾಸಕ ಎಂದರೆ ಎನ್.ಎಚ್.ಕೋನರಡ್ಡಿ. ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡುವ ಉದ್ದೇಶಕ್ಕಾಗಿ ಪ್ರತಿಯೊಬ್ಬರೂ ಜೆಡಿಎಸ್‌ ಬೆಂಬಲಿಸಿ ಎಂದು ಕೇಳಿಕೊಂಡರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಮಹಿಳೆಯರ ಸ್ವಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ, ಬಾಣಂತಿಯರಿಗೆ ಪ್ರತಿ ತಿಂಗಳು ₹6 ಸಾವಿರಂತೆ 6 ತಿಂಗಳ ಕಾಲ ₹36000 ಸಹಾಯಧನ, ವಿಧವೆಯರಿಗೆ, ಅಂಗವಿಕಲರಿಗೆ ಮಾಸಿಕ ₹2500 ಸಹಾಯಧನ, ಹಿರಿಯ ನಾಗರಿಕರಿಗೆ ಮಾಸಿಕ ₹5000 ಗೌರವ ಧನ ಹೀಗೆ ಹತ್ತಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ನವಲಗುಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ ಸೂಚನೆಗಳಿದ್ದರೆ ನೂತನ ಕಾರ್ಯಲಯಕ್ಕೆ ಬಂದು ತಿಳಿಸಿರಿ ಎಂದರು.

ಕೋನರಡ್ಡಿ ಮಾಡಿರುವ ಕಾರ್ಯಗಳು ಕ್ಷೇತ್ರದಲ್ಲಿ ಶ್ಲಾಘನೀಯವಾಗಿವೆ. ರೈತರ ಸಂಪೂರ್ಣ ಸಾಲ ಮನ್ನಾಕ್ಕಾಗಿ ಈ ಭಾರಿ ಜೆಡಿಎಸ್ ಗೆ ತಮ್ಮ ಮತವನ್ನು ನೀಡಿರಿ ಎಂದು ರೈತ ಮುಖಂಡ ಬಸಪ್ಪ ಕರ್ಲವಾಡ ಹೇಳಿದರು.

ಜೆಡಿಎಸ್ ಮುಖಂಡ ಶಿವಶಂಕರ ಕಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಕಷ್ಟದಲ್ಲಿರುವ ರೈತ ವರ್ಗಕ್ಕೆ ಮತ್ತು ಸ್ವಸಹಾಯ ಗುಂಪುಗಳ ಮಹಿಳೆಯರ ಕುಟುಂಬ ಅಭಿವೃದ್ಧಿಗಾಗಿ ಈ ಬಾರಿ ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲ್ಲೂಕು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಹನಮಂತ ಛಲವಾದಿ ಇವರನ್ನು ನೇಮಕ ಮಾಡಲಾಯಿತು. ಯಮನೂರಿನ ಶರಣು ಹಿರೇಮಠ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ರೂಪಾ ಕಲ್ಲೂರ, ಸದಸ್ಯರಾದ ಹಸನ್‌ಸಾಬ್‌ ಘೂಡುನಾಯ್ಕರ, ಹಸನ್‌ ನಾಯ್ಕ ನಾಯ್ಕವಾಡಿ, ಜಟ್ಟೆಪ್ಪ ಮುತ್ತಲಗೇರಿ, ಹಸೀನಾ ಬೇಗಂ ಡಾಲಾಯತ್, ಅಲ್ಲಮಪ್ರಭು ದಿಟ್ಟಿ, ಹಟೇಲಸಾಬ್‌ ಗಾಡಗೋಳಿ, ಭಗವಂತಪ್ಪ ಪುಟ್ಟಣ್ಣವರ, ಯಲ್ಲಪ್ಪ ಮರಬಸಿ, ಖಾದರಸಾಬ್‌ ಮುಳಗುಂದ, ವೀರಯ್ಯ ಜಂಗಿನಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT