ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಕೇರಿ ಬಂದ್ ಯಶಸ್ವಿ

Last Updated 9 ಅಕ್ಟೋಬರ್ 2019, 20:24 IST
ಅಕ್ಷರ ಗಾತ್ರ

ಕಲಕೇರಿ: ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಬುಧವಾರ ಕರೆ ನೀಡಿದ್ದ ಕಲಕೇರಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬೆಳಿಗ್ಗೆ 10 ಗಂಟೆಗೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಮುಖ್ಯ ಬಜಾರ್‌ವರೆಗೆ ಪ್ರತಿಭಟನಾ ರ್‍ಯಾಲಿ ನಡಸಿ, ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.

‘15 ದಿನ ಕಳೆದರೂ ಸಮಸ್ಯೆ ಬಗೆಹರಿಸಲು ತಾಲ್ಲೂಕು ಹಾಗೂ ಜಿಲ್ಲಾಡಳಿತ ವಿಫಲವಾಗಿವೆ’ ಎಂದು ಆರೋಪಿಸಿದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ತಾಳಿಕೋಟೆ ತಹಶೀಲ್ದಾರ್ ಅನಿಲಕುಮಾರ ಢವಳಗಿ ಮತ್ತು ಸಿಂದಗಿ ತಾಲ್ಲೂಕು ಪಂಚಾಯಿತಿಯ ಸುನೀಲ ಅವರು, ‘ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಧರಣಿ ನಿರತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಪಿಆರ್ಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಭೀಮಸಿ ಕಲಾದಗಿ, ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ.ಮಯೂರ, ಕೋಲಿ ಸಮಾಜದ ಶಿವಾಜಿ ಮೆಟಗಾರ, ಜನವಾದಿ ಸಂಘಟನೆಯ ಸುರೇಖಾಬಾಯಿ ರಜಪೂತ, ಬಿಎಸ್‌ಪಿ ಮುಖಂಡ ದಸಗೀರ ಮುಲ್ಲಾ, ರಾಜು ಗುಬ್ಬೇವಾಡ, ರಾಜು ಅಡಕಿ, ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಕಪ್ಪ ಬಡಿಗೇರ, ವಕೀಲ ಶ್ರೀನಾಥ ಪೂಜಾರಿ, ಕಾಳಮ್ಮ ಬಡಿಗೇರ ಮಾತನಾಡಿದರು.

ಕೆಪಿಆರ್‌ಎಸ್‌ ಗ್ರಾಮ ಘಟಕದ ಅಧ್ಯಕ್ಷ ಸಲಿಂ ನಾಯ್ಕೋಡಿ, ಎಂ.ಪಿ.ನದಾಫ, ರಫೀಕ್ ಮಂದೇವಾಲಿ, ಕಾಸೀಮ್ ನಾಯ್ಕೋಡಿ, ಬಸೀರ್ ನಾಯ್ಕೋಡಿ, ದವಲು ನಾಯ್ಕೋಡಿ, ಟಿಪ್ಪು ಸಿಪಾಯಿ, ಹಣಮಂತ ವಡ್ಡರ, ಮೈನುದ್ದಿನ್ ಬಾಗವಾನ, ಮೈಮೂದ್ ಕೆಂಭಾವಿ, ದೇವಿಂದ್ರ ಬಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT