ಕನಕಪುರ: ಅಪರಿಚಿತ ಮಹಿಳೆ ಕೊಲೆ

7

ಕನಕಪುರ: ಅಪರಿಚಿತ ಮಹಿಳೆ ಕೊಲೆ

Published:
Updated:
ಕನಕಪುರ ರಾಯಸಂದ್ರ ಬಳಿಯ ಹೌಸಿಂಗ್‌ ಬೋರ್ಡ್‌ನಲ್ಲಿ ಮಹಿಳೆಯೊಬ್ಬರ ಕೊಲೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಮೇಶ್‌ ಬಾನೋತ್‌ ಮತ್ತು ಡಿ.ವೈ.ಎಸ್‌.ಪಿ.ಮಂಜುನಾಥ್‌ ಹಾಗೂ ಸಿಬ್ಬಂದಿ

ಕನಕಪುರ: ಅಪರಿಚಿತ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಗುರುತು ಸಿಗದಂತೆ ಮುಖಕ್ಕೆ ಪೆಟ್ರೋಲ್‌ ಸುರಿದು ಸುಟ್ಟು ಹಾಕಿರುವ ಘಟನೆ ರಾಯಸಂದ್ರ ಬಳಿಯ ಹೌಸಿಂಗ್‌ ಬೋರ್ಡ್‌ನಲ್ಲಿ ಗುರುವಾರ ನಡೆದಿದೆ.‌

ಈ ಪ್ರದೇಶದಲ್ಲಿನ ಕುರಿಗಾಹಿಗಳಿಂದ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಕಾಲಿನಲ್ಲಿ ಗೆಜ್ಜೆ ಮತ್ತು ಕಾಲುಂಗುರ ಇದ್ದು, ಚಪ್ಪಲಿಯನ್ನು ಶವದ ಮುಂದೆ ಜೋಡಿಸಿದ ರೀತಿಯಲ್ಲಿ ಬಿಡಲಾಗಿದೆ. ಕೊಲೆಯಾದವರು 30 ವರ್ಷದ ವಿವಾಹಿತ ಮಹಿಳೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ರಮೇಶ್‌ ಬಾನೋತ್‌, ಡಿವೈಎಸ್‌ಪಿ ಮಂಜುನಾಥ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಮಲ್ಲೇಶ್‌, ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ನಟರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !