ಭಾನುವಾರ, ಆಗಸ್ಟ್ 25, 2019
20 °C

ಕೇಳಿದಷ್ಟು ನೀಡಲು ನೋಟ್‌ ಪ್ರಿಂಟ್ ಮಾಡುವುದಿಲ್ಲ: ಸಿ.ಎಂ

Published:
Updated:

ಶಿವಮೊಗ್ಗ: ‘ಬೆಳೆಹಾನಿಯ ಅಂದಾಜು ಸಿದ್ಧಪಡಿಸಲು ಅವಸರ ಬೇಡ. ಕೇಳಿದಷ್ಟು ಹಣ ನೀಡಲು ಸರ್ಕಾರದಲ್ಲಿ ನೋಟ್‌ ಪ್ರಿಂಟ್‌ ಮಾಡುವ ಯಂತ್ರವಿಲ್ಲ. 8ರಿಂದ 10 ದಿನಗಳು ಸಮಯ ತೆಗೆದುಕೊಂಡು ನಿಖರ ವರದಿ ನೀಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅತಿವೃಷ್ಟಿ ನಷ್ಟದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವ ವನ್ಯಜೀವಿ ವಿಭಾಗದ ಡಿಎಫ್‌ಒ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಹೊಂದಿಕೊಂಡು ಹೋಗಿ ಇಲ್ಲವೇ ರಾಯಚೂರು, ಕಲಬುರ್ಗಿಗೆ ಹೋಗಲು ಸಿದ್ಧರಾಗಿ’ ಎಂದು ಎಚ್ಚರಿಸಿದರು.

Post Comments (+)