ಕರುಣಾನಿಧಿಗೆ ಉಂಟು ರಾಮನಗರದ ನಂಟು

7
ಕನ್ನಿಮೋಳಿ ಒಡೆತನದ ಫಾರ್ಮ್‌ಹೌಸ್‌ನಲ್ಲಿ ಆಗಾಗ್ಗೆ ವಿಶ್ರಾಂತಿ

ಕರುಣಾನಿಧಿಗೆ ಉಂಟು ರಾಮನಗರದ ನಂಟು

Published:
Updated:
ಪತ್ಮಿ ರಾಜಲಿ ಅಮ್ಮಾಳ್, ಪುತ್ರಿ ಕನಿಮೋಳಿ ಜೊತೆಗೆ ಕರುಣಾನಿಧಿ

ರಾಮನಗರ: ತಮಿಳುನಾಡಿನ ರಾಜಕೀಯ ನೇತಾರರಾಗಿದ್ದ ಕರುಣಾನಿಧಿ ಜಿಲ್ಲೆಯೊಂದಿಗೆ ನಂಟು ಹೊಂದಿದ್ದರು. ಇಲ್ಲಿನ ನೆಲದಲ್ಲಿ ತಮ್ಮ ಬದುಕಿನ ಒಂದಿಷ್ಟು ದಿನಗಳನ್ನು ಹಾಯಾಗಿ ಕಳೆದಿದ್ದರು.

ಬಿಡದಿ–ಹಾರೋಹಳ್ಳಿ ಗಡಿಯಲ್ಲಿರುವ ವಡೇರಹಳ್ಳಿ ಬಳಿ ಅವರ ಪುತ್ರಿ ಕನ್ನಿಮೋಳಿ ಅವರಿಗೆ ಸೇರಿದ ತೋಟ ಮತ್ತು ಫಾರ್ಮ್‌ ಹೌಸ್ ಇದೆ. ರೆಸಾರ್ಟ್‌ ಮಾದರಿಯಲ್ಲಿಯೇ ಸೌಲಭ್ಯಗಳನ್ನು ಹೊಂದಿದೆ. ತೆಂಗು, ಮಾವು ಸಹಿತ ವಿವಿಧ ಜಾತಿಯ ಮರಗಳಿದ್ದು, ಸುತ್ತ ಆಳೆತ್ತರದ ಕಾಂಪೌಂಡ್ ಮತ್ತು ಅದರ ಮೇಲೆ ತಂತಿ ಬೇಲಿಯನ್ನೂ ಅಳವಡಿಸಲಾಗಿದೆ.
ಬೆಂಗಳೂರಿಗೆ ಬಂದಾಗಲೆಲ್ಲ ಕರುಣಾನಿಧಿ ಈ ಫಾರ್ಮ್‌ಹೌಸ್‌ಗೆ ಬರುವುದನ್ನು ಮರೆಯುತ್ತಿರಲಿಲ್ಲ. ತಮ್ಮ ಕಾರ್ಯದ ಒತ್ತಡದ ದಿನಗಳಲ್ಲಿ ವಿರಾಮ ಪಡೆಯಲು ಇಲ್ಲಿಗೆ ಬರುತ್ತಿದ್ದರು.

ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ಅವರು ಈ ಫಾರ್ಮ್‌ ಹೌಸ್‌ಗೆ ತಪ್ಪದೇ ಬರುತ್ತಿದ್ದರು. ಹೀಗೆ ಬಂದವರು ತಿಂಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಇಲ್ಲಿನ ತಂಪಾದ ವಾತಾವರಣ ಅವರ ಮನಸ್ಸಿಗೆ ಮುದ ನೀಡಿತ್ತು. ಅವರಿಗೆ ಸದಾ ಬೆಂಗಾವಲು ಪಡೆ ಇರುತ್ತಿದ್ದುದರಿಂದ ಜನರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದರು.
ಕಾವೇರಿ ವಿವಾದ ಭುಗಿಲೆದ್ದಾಗಲೆಲ್ಲ ಈ ಫಾರ್ಮ್ ಹೌಸ್‌ ಆವರಣ ಪ್ರತಿಭಟನೆಯ ಕೇಂದ್ರವೂ ಆಗುತಿತ್ತು.

ಬಸ್ ಸಂಚಾರ ಸ್ಥಗಿತ
ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ, ಕನಕಪುರದ ಹುಣಸನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವು ಮಂಗಳವಾರ ಸಂಜೆಯಿಂದ ಸ್ಥಗಿತಗೊಂಡಿದೆ. ತಮಿಳುನಾಡಿನ ಕೋಟೆವೂರು, ನಾಟರಪಾಳ್ಯ, ಜಿಮಾನತ್‌ ಹಳ್ಳಿಗಳಿಗೆ ತೆರಳಿದ್ದ ಬಸ್‌ಗಳನ್ನು ವಾಪಸ್ ಕರೆಯಿಸಿಕೊಳ್ಳಲಾಗಿದ್ದು, ಹುಣಸನಹಳ್ಳಿ ಬಳಿ ನಿಲ್ಲಿಸಲಾಗಿದೆ. ಬುಧವಾರವೂ ಬಸ್‌ ಸಂಚಾರ ಸ್ಥಗಿತಗೊಳ್ಳಲಿದೆ.
***
 

ಇದನ್ನೂ ಓದಿರಿ

'ಪರಾಶಕ್ತಿ' ಸಿನಿಮಾದ ಚಿತ್ರಕಥೆ ಮೂಲಕ ಮೋಡಿ ಮಾಡಿದ್ದ ಕರುಣಾನಿಧಿ

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣಮಾಡಿದ್ದ ಕರುಣಾನಿಧಿ

ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಕೋಲಾರದ ಚಿನ್ನದ ಗಣಿಗೆ ಇಳಿದಿದ್ದ ಕರುಣಾನಿಧಿ

ಕರುಣಾನಿಧಿ ಬದುಕಿನ ಹಾದಿ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !