ಶಿಕಾರಿಪುರಕ್ಕೂ ಹಬ್ಬಿದ ಮಂಗನಕಾಯಿಲೆ ವೈರಸ್

7

ಶಿಕಾರಿಪುರಕ್ಕೂ ಹಬ್ಬಿದ ಮಂಗನಕಾಯಿಲೆ ವೈರಸ್

Published:
Updated:

ಶಿವಮೊಗ್ಗ: ಇದೇ ಮೊದಲ ಬಾರಿ ಶಿಕಾರಿಪುರ ತಾಲ್ಲೂಕಿನಲ್ಲೂ ಮಂಗನಕಾಯಿಲೆ ವೈರಸ್‌ ಹರಡಿರುವುದು ದೃಢಪಟ್ಟಿದೆ.

ಅಂಬಾರಗೊಳ್ಳದ ಬಳಿ ಈಚೆಗೆ ದೊರೆತ ಮೃತ ಮಂಗನ ದೇಹದಲ್ಲಿ ಕಾಯಿಲೆಗೆ ಕಾರಣವಾಗುವ ವೈರಸ್‌ ಇರುವುದನ್ನು ಪುಣೆ ಪ್ರಯೋಗಾಲಯದ ವರದಿ ಖಚಿತಪಡಿಸಿದೆ.

ಇದುವರೆಗೂ ಸಾಗರ, ಹೊಸನಗರ, ಸೊರಬ ಹಾಗೂ ತೀರ್ಥಹಳ್ಳಿ ಭಾಗಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು. ಈಗ ಶಿಕಾರಿಪುರಕ್ಕೂ ಹಬ್ಬಿರುವುದು ಜನರ ಆತಂಕ ಹೆಚ್ಚಿಸಿದೆ.

ಮತ್ತೆ ನಾಲ್ಕು ಜನರು ಮಣಿಪಾಲಕ್ಕೆ: ಸಾಗರ ತಾಲ್ಲೂಕು ಅರಳಗೋಡು ಸಮೀಪದ ಕಂಚಿಕೈ, ಮರಾಠಿ ಕ್ಯಾಂಪ್‌ನ ನಾಲ್ವರಿಗೆ ಮಂಗನಕಾಯಿಲೆ ರೋಗ ಲಕ್ಷಣ ಕಾಣಿಸಿಕೊಂಡಿದೆ. ಎಲ್ಲರನ್ನೂ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !