ಶಂಕಿತ ಮಂಗನ ಕಾಯಿಲೆಗೆ ಮತ್ತೊಬ್ಬರು ಬಲಿ

7

ಶಂಕಿತ ಮಂಗನ ಕಾಯಿಲೆಗೆ ಮತ್ತೊಬ್ಬರು ಬಲಿ

Published:
Updated:

ಕಾರ್ಗಲ್‌: ಶಂಕಿತ ಮಂಗನ ಕಾಯಿಲೆಯಿಂದ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳಕಾರು ಕೃಷ್ಣಪ್ಪ ಮೃತಪಟ್ಟಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಅವರನ್ನು ಗುರುವಾರ ಮೆಗ್ಗಾನ್‌ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಐದು ದಿನಗಳ ಹಿಂದೆ ಅವರಿಗೆ ಮಂಗನಕಾಯಿಲೆ ಜ್ವರ ಕಾಣಿಸಿಕೊಂಡಿತ್ತು. ಕಾರ್ಗಲ್‌ನ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಹೆಚ್ಚಿನ ಚಿಕಿತ್ಸೆ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತ ಕೃಷ್ಣಪ್ಪ ಅವರು ಕುಂದಾಪುರ ಮೂಲದವರು. ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಕಾರ್ಗಲ್ ಸಮೀಪದ ಕುಳಕಾರು ಗ್ರಾಮದಲ್ಲಿ ವಾಸವಾಗಿದ್ದರು.

ಹೃದಯಾಘಾತ: 50 ವರ್ಷದ ಕೃಷ್ಣಪ್ಪ ಅವರಿಗೆ ಹೃದಯಾಘಾತವಾಗಿರುವ ಸಾಧ್ಯತೆ ಇದೆ. ಮಂಗನಕಾಯಿಲೆ ವೈರಸ್‌ ತಗುಲಿದವರು ಹಲವು ಹಂತಗಳ ಸಮಸ್ಯೆ ಎದುರಿಸಿದ ನಂತರ ಮೃತಪಡುತ್ತಾರೆ. ಕೃಷ್ಣಪ್ಪ ಅವರು ದಿಢೀರ್ ಮೃತಪಟ್ಟಿದ್ದಾರೆ. ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಕಾರಣ ಖಚಿತವಾಗಲಿದೆ ಎಂದು ಡಿಎಚ್‌ಒ ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !