ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ತಾಲ್ಲೂಕಿಗೂ ದಾಳಿ ಇಟ್ಟ ಕೆಎಫ್‌ಡಿ

Last Updated 22 ಏಪ್ರಿಲ್ 2019, 19:48 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಸಾಗರ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡು ಸಾಕಷ್ಟು ಅನಾಹುತ ಸೃಷ್ಟಿಸಿರುವ ಮಂಗನಕಾಯಿಲೆ ಈಗ ಶಿವಮೊಗ್ಗ ತಾಲ್ಲೂಕಿಗೂ ದಾಳಿ ಇಟ್ಟಿದೆ.

ಶಿವಮೊಗ್ಗದಿಂದ ಕೂಗಳತೆಯ ದೂರದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ಹಲವರಿಗೆ ಕೆಎಫ್‌ಡಿ ಇರುವುದು ದೃಢಪಟ್ಟಿದೆ. ಬಿ.ಕುಮಾರ್ ಎನ್ನುವವರ ಸ್ಥಿತಿ ಚಿಂತಾಜನಕವಾಗಿದೆ. ಮೂರು ದಿನಗಳ ಹಿಂದೆ ಅವರು ಕೋಮಾಕ್ಕೆ ಜಾರಿದ್ದಾರೆ. ಇದುವರೆಗೂ ಪ್ರಜ್ಞೆ ಬಂದಿಲ್ಲ.

ಶಿವಮೊಗ್ಗ ನಗರದಲ್ಲಿ 4 ಲಕ್ಷ ಜನರಸಂಖ್ಯೆ ಇದ್ದು, ಒಂದು ವೇಳೆ ಕಾಯಿಲೆ ಹಬ್ಬಿದ್ದರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.ವೈದ್ಯಕೀಯ ಮಹಾವಿದ್ಯಾಲಯದ ಮೆಗ್ಗಾನ್‌ ಆಸ್ಪತ್ರೆ ಸಮೀಪದಲ್ಲೇ ಇದ್ದರೂ, ರೋಗಿಗಳನ್ನು ಮಣಿಪಾಲಕ್ಕೆ ಕಳುಹಿಸಲಾಗುತ್ತಿದೆ. ತಕ್ಷಣ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಎಫ್‌ಡಿ ಚಿಕಿತ್ಸಾ ಘಟಕ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಚುನಾವಣಾ ಕರ್ವ್ಯದ ಒತ್ತಡದಲ್ಲಿ ಇರುವ ಕಾರಣ ಮಂಗನಕಾಯಿಲೆ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳು ನಿಧಾನಗತಿಯಲ್ಲಿ ಸಾಗಿವೆ. ಮಳೆ ಬರುವರೆಗೂ ಇನ್ನೆಷ್ಟು ಜನರುಜೀವಗಳನ್ನು ಕಳೆದುಕೊಳ್ಳಬೇಕಿದೆಯೋ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಶೆಟ್ಟಿಹಳ್ಳಿಗ್ರಾಮದ ಬೀರಾನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT