ಮಕ್ಕಳ ಹಕ್ಕುಗಳ ಕ್ಲಬ್‌ ಕಾರ್ಯಾರಂಭ

7

ಮಕ್ಕಳ ಹಕ್ಕುಗಳ ಕ್ಲಬ್‌ ಕಾರ್ಯಾರಂಭ

Published:
Updated:
Deccan Herald

ಮಾಗಡಿ: ಮಕ್ಕಳು ಭವ್ಯ ಭಾರತದ ನವನಾಯಕರಿದ್ದಂತೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್‌ ಎಚ್‌.ಎಸ್‌. ಅಭಿಪ್ರಾಯ ಪಟ್ಟರು.

ಪಟ್ಟಣದ ಜಿಜಿಎಂಎಸ್‌ ನಲ್ಲಿ ಡಾನ್‌ ಬಾಸ್ಕೊ ಯುವಮಾರ್ಗದ ವತಿಯಿಂದ ಸಾವಿತ್ರಿಬಾ ಫುಲೆ ಮಕ್ಕಳ ಹಕ್ಕುಗಳ ಕ್ಲಬ್‌ ಉದ್ಘಾಟಿಸಿ ಅವರು ಮಾತನಾಡಿದರು.

‘14 ವರ್ಷದ ಒಳಗಿನ ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸಲೇ ಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಿಂದ ನಾವೆಲ್ಲರೂ ತಲೆತಗ್ಗಿಸುವಂತಾಗುತ್ತಿದೆ. ಬಾಲ್ಯದಲ್ಲಿಯೇ ನೈತಿಕತೆ, ಸ್ವಯಂ ಶಿಸ್ತು, ಕಲಿಸಿ ಕೊಡುವುದು ಇಂದಿನ ಅಗತ್ಯವಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯವಿವಾಹ ರದ್ದತಿಯಂಥ ಅನಿಷ್ಟಗಳನ್ನು ಎಲ್ಲರೂ ವಿರೋಧಿಸಬೇಕು. ಅರಳುವ ಪುಷ್ಪಗಳಂತೆ ಮಕ್ಕಳನ್ನು ಸಂರಕ್ಷಿಸುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.

ಮುಖ್ಯಶಿಕ್ಷಕಿ ಮಾಲತಮ್ಮ, ಶಿಕ್ಷಕ ಕೆ.ಎಚ್‌.ಲೋಕೇಶ್‌, ಡಾನ್‌ ಬಾಸ್ಕೊ ಯುವ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತ ಲೋಕೇಶ್‌ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ಶಾಲಾ ಮಕ್ಕಳು, ಶಿಕ್ಷಕರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !