ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳ ಹತ್ಯೆ ಖಂಡಿಸಿ ಪ್ರತಿಭಟನೆ

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ
Last Updated 15 ಅಕ್ಟೋಬರ್ 2019, 13:37 IST
ಅಕ್ಷರ ಗಾತ್ರ

ಮಡಿಕೇರಿ: ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ, ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಜರಂಗದಳದ ವಿದ್ಯಾರ್ಥಿ ಘಟಕದ ಪ್ರಮುಖರಾದ ವಿನಯ್ ಕುಮಾರ್ ಮಾತನಾಡಿ, ಅ. 10ರಂದು ಪಶ್ಚಿಮ ಬಂಗಾಳದಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಿಂದು ಪ್ರಕಾಶ್ ಪಾಲ್, ಗರ್ಭಿಣಿ ಪತ್ನಿ ಹಾಗೂ 8 ವರ್ಷದ ಆಂಗನ್‌ನ ಅಮಾನುಷವಾಗಿಹತ್ಯೆ ನಡೆಸಲಾಗಿದೆ. ಈ ಘಟನೆಯಿಂದ ದೇಶದ ಹಿಂದೂ ಸಮಾಜ ಆತಂಕಗೊಂಡಿದೆ ಎಂದು ಹೇಳಿದರು.

ದೇಶಕ್ಕೆ ಬಾಂಗ್ಲಾದೇಶಿನುಸುಳು ಕೋರರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅವರ ಓಟ್‌ಬ್ಯಾಂಕ್ ಆಸೆಯಿಂದ ಕೂಡಿದ ಮಮತಾ ಬ್ಯಾನರ್ಜಿ ಸರ್ಕಾರಅವರ ಕಾನೂನು ವಿರೋಧಿ ಕೃತ್ಯಗಳನ್ನು ಕಂಡರೂ ಕಣ್ಮುಚ್ಚಿಕುಳಿತಿದೆ ಎಂದು ಆರೋಪಿಸಿದರು.

ಕೆಲವು ಹಿಂದೂ ವಿರೋಧಿಗಳು ದೇಶಕ್ಕೆ ಕಳಂಕ ತಂದಿದ್ದಾರೆ. ಇಂತವರನ್ನು ದೇಶದಿಂದ ಗಡೀಪಾರು ಮಾಡಬೇಕು. ಇನ್ನು ಮುಂದೆ ದೇಶದಲ್ಲಿ ಅತ್ಯಾಚಾರ ಎಸಗುವ ಕ್ರೂರಿಗಳಿಗೆ ಮರಣದಂಡನೆ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಪಶ್ಚಿಮ ಬಂಗಾಳದ ಹಿಂದೂಗಳ ಮೇಲೆ ಷಡ್ಯಂತ್ರಪೂರ್ವಕವಾಗಿ ಭಯ ಹುಟ್ಟಿಸುವ ಕಾರ್ಯ ನಡೆಯುತ್ತಿದೆ. ಭಯೋತ್ಪಾದಕರಿಗೆ ಅಲ್ಲಿನಸರ್ಕಾರ ಮುಕ್ತ ರೂಪದಲ್ಲಿ ಬೆಂಬಲ ನೀಡುತ್ತಿದೆ ಎಂದು ದೂರಿದರು.

ಬೇಡಿಕೆಗಳು:ಪಶ್ಚಿಮ ಬಂಗಾಳ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಶಾಸನ ಹೇರಬೇಕು. ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ, ಹಂತಕರಿಗೆ ಮರಣದಂಡನೆ ವಿಧಿಸಬೇಕು. ಅಕ್ರಮ ಬಾಂಗ್ಲಾದೇಶಿಯರ ಪ್ರವೇಶವನ್ನುಪತ್ತೆಹಚ್ಚಿ ಬಾಂಗ್ಲಾಕ್ಕೆ ವಾಪಸುಕಳುಹಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಜರಂಗದಳದ ಜಿಲ್ಲಾ ಸಂಯೋಜಕ ಕೆ.ಎಚ್. ಚೇತನ್, ಪ್ರಮುಖರಾದ ಮಹೇಶ್ ಜೈನಿ, ಟಿ.ಎಸ್.ಪ್ರಕಾಶ್, ಮನು, ಉಣ್ಣಿಕೃಷ್ಣ, ರಮೇಶ್ ಹಾಗೂ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT