ಭತ್ತ ಖರೀದಿ: ನೋಂದಣಿಗೆ ಫೆ. 28 ಕೊನೆ

7

ಭತ್ತ ಖರೀದಿ: ನೋಂದಣಿಗೆ ಫೆ. 28 ಕೊನೆ

Published:
Updated:

ಮಡಿಕೇರಿ: ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಪ್ರತಿ ಕ್ವಿಂಟಲ್‌ಗೆ ₹ 1,750 ದರದಲ್ಲಿ ಸಾಮಾನ್ಯ ಭತ್ತವನ್ನು ಮತ್ತು ₹ 1,770 ದರದಲ್ಲಿ ’ಎ’ ಗ್ರೇಡ್ ಭತ್ತವನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ರೈತರ ನೋಂದಣಿ ಅವಧಿಯನ್ನು ಫೆ.28ರ ತನಕ ವಿಸ್ತರಿಸಲಾಗಿದೆ.

ರೈತರು ನಿಗದಿತ ಅವಧಿಯೊಳಗೆ ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಎಪಿಎಂಸಿ, ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಎಪಿಎಂಸಿ ಮತ್ತು ಮಡಿಕೇರಿ ತಾಲ್ಲೂಕು ಎಪಿಎಂಸಿ ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಎಸ್. ಸದಾಶಿವಯ್ಯ ಕೋರಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !