ಪಟ್ಟಣ ಸಹಕಾರ ಬ್ಯಾಂಕ್‌: ಬಿಜೆಪಿ ಮರಳಿ ಅಧಿಕಾರಕ್ಕೆ

7

ಪಟ್ಟಣ ಸಹಕಾರ ಬ್ಯಾಂಕ್‌: ಬಿಜೆಪಿ ಮರಳಿ ಅಧಿಕಾರಕ್ಕೆ

Published:
Updated:

ಮಡಿಕೇರಿ: ಮಡಿಕೇರಿಯ ಪಟ್ಟಣ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮರಳಿ ಅಧಿಕಾರದ ಗದ್ದುಗೆ ಏರಿದರು.

ಹಾಲಿ ಅಧ್ಯ‌ಕ್ಷ ಬಿ.ಕೆ.ಜಗದೀಶ್ ಹಾಗೂ ಉಪಾಧ್ಯಕ್ಷ ಎಸ್.ಸಿ.ಸತೀಶ್ ಸಹಿತ ಇತರ 6 ಮಂದಿ ಜಯಗಳಿಸಿದರು. ಸಾಮಾನ್ಯ ವರ್ಗದ 3 ಸ್ಥಾನಗಳೊಂದಿಗೆ 2 ಮಹಿಳಾ ಸ್ಥಾನಗಳನ್ನು ಮೈತ್ರಿ ಬಣ ತನ್ನದಾಗಿಸಿಕೊಂಡಿತು.

ಸಾಮಾನ್ಯ ವರ್ಗದ 7 ಸ್ಥಾನಗಳಿಗೆ 19 ಮಂದಿ ಸ್ಪರ್ಧೆಯಲ್ಲಿದ್ದರು. ಅತ್ಯಧಿಕ ಮತಗಳಿಂದ ಅಧ್ಯಕ್ಷ ಬಿ.ಕೆ. ಜಗದೀಶ ಗೆಲುವು ಸಾಧಿಸಿದರೆ, ಮೈತ್ರಿ ಬಣದಿಂದ ಬಿ.ಎಂ.ರಾಜೇಶ್ ಯಲ್ಲಪ್ಪ, ಕೋಡಿ ಚಂದ್ರಶೇಖರ್, ಜಿ.ಎಂ.ಸತೀಶ್ ಪೈ ಗೆದ್ದಿದ್ದಾರೆ.

ಉಳಿದಂತೆ ಬಿಜೆಪಿ ಬೆಂಬಲಿತ ಕನ್ನಂಡ ಸಂಪತ್, ಗಿರೀಶ್ ಆರಾಧನಾ, ಬಿ.ವಿ. ರೋಶನ್ ಜಯಿಸಿದ್ದಾರೆ. ಎರಡು ಮಹಿಳಾ ಮೀಸಲು ಸ್ಥಾನಗಳಿಗೆ ನಡೆದ ಪೈಪೋಟಿಯಲ್ಲಿ ಬಿಜೆಪಿ ಬೆಂಬಲಿತ ಭಾರತಿ ರಮೇಶ್ ಹಾಗೂ ಐ.ಜಿ.ಶಿವಕುಮಾರಿ ಪರಾಜಯಗೊಂಡು ಮೈತ್ರಿ ಬಣದ ಕಾವೇರಮ್ಮ ಸೋಮಣ್ಣ ಹಾಗೂ ಈಶ್ವರಿ ಮಾಚಯ್ಯ ಜಯ ಪಡೆದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !