ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನಲ್ಲಿ ಹೆಡೆ ಎತ್ತಿದ್ದ ನಾಗರಹಾವು

Published 14 ಸೆಪ್ಟೆಂಬರ್ 2023, 13:37 IST
Last Updated 14 ಸೆಪ್ಟೆಂಬರ್ 2023, 13:37 IST
ಅಕ್ಷರ ಗಾತ್ರ

ಸಿದ್ದಾಪುರ: ಬೆಳಿಗ್ಗೆ ಶೂ ಹಾಕಿಕೊಳ್ಳಲು ಹೋದ ಸಮಯದಲ್ಲಿ ಶೂ ಒಳಗಿಂದ ನಾಗರಹಾವು ಹೆಡೆ ಎತ್ತಿದ ಪ್ರಸಂಗ ನೆಲ್ಯಹುದಿಕೇರಿ ನಡೆದಿದೆ.

ನೆಲ್ಯಹುದಿಕೇರಿ ನಿವಾಸಿ ಶಾಲಿ ಎಂಬುವವರು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಲು ತಯಾರಾಗಿದ್ದು, ಮನೆಯ ಮುಂಭಾಗದಲ್ಲಿ ಇಟ್ಟಿದ್ದ ಶೂ ಧರಿಸಲು ಮುಂದಾಗಿದ್ದಾರೆ. ಈ ವೇಳೆ ಅರದಲ್ಲಿದ್ದ ನಾಗರಹಾವು ಕಾಣಿಸಿಕೊಂಡಿದ್ದು, ಕೂಡಲೇ ದೂರ ಸರಿದಿದ್ದಾರೆ. ಕೂಡಲೇ ಸ್ಥಳೀಯ ಉರಗಪ್ರೇಮಿ ಸುರೇಶ್ ಅವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದಾರೆ. ಆಗ ಸುರೇಶ್ ಸ್ಥಳಕ್ಕೆ ಬಂದು ಹಾವನ್ನು ಸೆರೆಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಸುರೇಶ್, ‘ಬೆಳಗ್ಗೆ ಮನೆಯಿಂದ ತರಾತುರಿಯಲ್ಲಿ ತೆರಳುವಾಗ ಪಾದರಕ್ಷೆ ಧರಿಸುವ ವೇಳೆ ಎಚ್ಚರಿಕೆ ವಹಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT