ಕುಶಾಲನಗರ (ಕೊಡಗು ಜಿಲ್ಲೆ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಾದ ಮಂಗಳವಾರ ಜನಿಸಿದ ತಮ್ಮ ಮಗುವಿಗೆ, ತಾಲ್ಲೂಕಿನ ಸುಂದರನಗರದ ನಿವಾಸಿ ಮಹೇಂದ್ರ–ಜಯಲಕ್ಷ್ಮಿ ದಂಪತಿ ಮಂಗಳವಾರ ಅವರ ಹೆಸರನ್ನೇ ಇಟ್ಟರು. ಬಿಜೆಪಿ ಕಾರ್ಯಕರ್ತರೂ ಆಗಿರುವ ಮಹೇಂದ್ರ ಮೋದಿಯವರ ಅಭಿಮಾನಿ. ಹೀಗಾಗಿ ಮಗುವಿಗೆ ಅವರ ಹೆಸರನ್ನಿಟ್ಟರು.