ಮಡಿಕೇರಿ: ನಗರದ ಶಾಂತಿನಿಕೇತನ ಯುವಕ ಸಂಘದ 46ನೇ ವರ್ಷದ ಗಣೇಶೋತ್ಸವದ ಮೆರವಣಿಗೆಯು ಶನಿವಾರ ಅದ್ದೂರಿಯಾಗಿ ನಡೆಯಿತು.

‘ಲೋಕಕಲ್ಯಾಣಕ್ಕಾಗಿ ಮಯೂರೇಶನಿಂದ ಸಿಂಧು ದೈತ್ಯ ರಾಜನ ಸಂಹಾರ’ ಎಂಬ ಕಥಾವಸ್ತುವುಳ್ಳ ಅದ್ಭುತ ಪ್ರದರ್ಶನವನ್ನು ತನ್ನ ಮಂಟಪದಲ್ಲಿ ಮೆರವಣಿಗೆಯ ಅಲ್ಲಲ್ಲಿ ಪ್ರದರ್ಶಿಸುವ ಮೂಲಕ ಸಾವಿರಾರು ಮಂದಿಯ ಚಿತ್ತವನ್ನು ತನ್ನತ್ತ ಸೆಳೆಯಿತು.

ಅಯೋಧ್ಯೆಯ ಮಂದಿರದ ಮಾದರಿಯಲ್ಲೇ ಮಂಟಪವೊಂದನ್ನು ನಿರ್ಮಿಸಿ ಅಯೋಧ್ಯೆ ರಾಮನಂತೆಯೇ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಮನ ಸೆಳೆದಿದ್ದ ಸಂಘವು ವಿಸರ್ಜನೋತ್ಸವದಲ್ಲೂ ತನ್ನ ವೈಶಿಷ್ಟ್ಯತೆಯನ್ನು ಪ್ರದರ್ಶಿಸಿ ಜನಮನ ಗೆದ್ದಿತು.

ಮೆರವಣಿಗೆಯುದ್ದಕ್ಕೂ ನೂರಾರು ಮಂದಿ ಯುವಕ, ಯುವತಿಯರು ನರ್ತಿಸಿ ಸಂಭ್ರಮಿಸಿದರು. ಸಾವಿರಾರು ಜನರು ಮೆರವಣಿಯುದ್ದಕ್ಕೂ ಹೆಜ್ಜೆ ಹಾಕಿದರು. ಭಕ್ತರು ಜಯಘೋಷ ಮೊಳಗಿಸಿದರು. ಕೇಸರಿ ಧ್ವಜಗಳು ಹಾರಾಡಿದವು.

ಸಂಜೆ ಆರಂಭವಾದ ಶೋಭಾಯಾತ್ರೆಯು ಶಾಂತಿನಿಕೇತನ, ಕೆಎಸ್ಆರ್ಟಿಸಿ ಡಿಪೊ ಮುಂಭಾಗ, ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ನಿಲ್ದಾಣ, ಇಂದಿರಾಗಾಂಧಿ ವೃತ್ತ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿತು.

ಕಥಾವಸ್ತುವಿನ ಪ್ರದರ್ಶನದ ವೇಳೆ ಮೂರ್ತಿಗಳ ಚಲನವಲನ, ವೈಭವೋಪೇತ ಅಲಂಕಾರ, ಅದ್ಭುತವಾದ ಬೆಳಕಿನ ವಿನ್ಯಾಸಗಳು ಕಣ್ಮನ ಸೂರೆಗೊಂಡವು. ಪಟಾಕಿಗಳ ಸಿಡಿತ, ವಿದ್ಯುತ್ ದೀಪಗಳ ಭವ್ಯವಾದ ಬೆಳಕು, ವರ್ಣರಂಜಿತವಾದ ಕಳೆಯನ್ನು ಮೆರವಣಿಗೆಗೆ ತಂದವು.

ವಾದ್ಯಗಳ ನಿನಾದ, ಕಲಾತಂಡಗಳ ನೃತ್ಯ ಸೇರಿದಂತೆ ಕಲಾತ್ಮಕವಾದ ಝಲಕುಗಳೂ ಮೆರವಣಿಗೆಯಲ್ಲಿದ್ದವು. ತಡರಾತ್ರಿಯವರೆಗೂ ನಡೆದ ವಿಜೃಂಭಣೆಯ ಮೆರವಣಿಗೆಗೆ ನಗರ ಮಾತ್ರವಲ್ಲ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಬಂದಿದ್ದ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.

ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದ್ದುದ್ದರಿಂದಲೇ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚಿನ ಮಂದಿ ಮಫ್ತಿಯಲ್ಲಿದ್ದು, ಆಯಾಕಟ್ಟಿನ ಸ್ಥಳಗಳಲ್ಲಿ ನಿಗಾ ಇರಿಸಿದ್ದರು.

ನಗರದ ಹಲವೆಡೆ ರಾತ್ರಿ ಇಡೀ ಸಂಚರಿಸಿದ ಮೆರವಣಿಗೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗಿ ಪೊಲೀಸರಿಂದ ಬಿಗಿ ಬಂದೋಬಸ್ತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.