ಹಲಸಿನಬೀಜದ ಪುಡಿ, ಬಾಳೆಕುಂಬೆ ಪಲ್ಯ, ಬಾಳೆಹಣ್ಣಿನ ಕಜ್ಜಾಯ, ಆಟಿಸೊಪ್ಪಿನ ಹಲ್ವಾ, ಕೂಗಲಿಟ್ಟು ಹೀಗೆ ವೈವಿಧ್ಯಮಯ ಖಾದ್ಯಗಳು ಎಲ್ಲರನ್ನೂ ಸೆಳೆದವು. ದಂಬೆಕೋಡಿ ಲೀಲಾ ಚಿಣ್ಣಪ್ಪ ಅವರು ಆಟಿ ಪಾಯಸ ಸವಿಯುವ ಮೂಲಕ ಆಹಾರ ಪ್ರದರ್ಶನ ಉದ್ಘಾಟಿಸಿದರು. ಮಹಿಳೆಯರು ರಸಪ್ರಶ್ನೆ, ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ, ಸೋಬಾನೆ, ಜನಪದಗೀತೆಗಳನ್ನು ಹಾಡಿ ಸಂಭ್ರಮಿಸಿದರು.