ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‍ಗೆ ಕೊಂಡಿಜಮ್ಮಂಡ ತಂಡ

ಪೊನ್ನಂಪೇಟೆ ಶಾಲಾ ಮೈದಾನದಲ್ಲಿ ಅಮ್ಮಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಗೆ ಚಾಲನೆ
Last Updated 18 ಏಪ್ರಿಲ್ 2021, 4:16 IST
ಅಕ್ಷರ ಗಾತ್ರ

ಪೊನ್ನಂಪೇಟೆ: ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಮ್ಮಕೊಡವ ಸಮುದಾಯದ ‘ಬಲ್ಯಂಡ ಕ್ರಿಕೆಟ್’ ಟೂರ್ನಿಗೆ ಶನಿವಾರ ಚಾಲನೆ ನೀಡಲಾಯಿತು.

ಶಾಲಾ ಮುಖ್ಯದ್ವಾರದಿಂದ ಅಮ್ಮಕೊಡವತಿಯರು ತಳಿಯತಕ್ಕಿ ಬೊಳ್ಚೊಂದಿಗೆ ವೇದಿಕೆಗೆ ಆಗಮಿಸಿದರು.

ಬಲ್ಯಂಡ ಕುಟುಂಬದ ಅಧ್ಯಕ್ಷ ಬಲ್ಯಂಡ ಎಸ್ ಪ್ರತಾಪ್ ಬ್ಯಾಟ್ ಮಾಡುವ ಮೂಲಕ ಟೂರ್ನಿ ಉದ್ಘಾಟಿಸಿದರು. ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಹೆಜ್ಜೆ ಹಾಕಿದರು. ಸಭಾ ಕಾರ್ಯಕ್ರಮವನ್ನು ಕುಟುಂಬದ ಹಿರಿಯರಾದ ಬಲ್ಯಂಡ ಶ್ರೀನಿವಾಸ್ ಉದ್ಘಾಟಿಸಿದರು.

ಹಿರಿಯರಾದ ಗುಂಬೀರ ಗಣೇಶ್, ಬಾನಂಡ ಅಪ್ಪಣಮಯ್ಯ, ಆಂಡಮಾಡ ಗೋವಿಂದಮಯ್ಯ, ಬಾನಂಡ ಜನಾರ್ದನ, ವಾಸುವರ್ಮ, ಕಾಳಪಂಡ ಟಿಪ್ಪು ಬಿದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಪೂವಯ್ಯ ಇದ್ದರು.

ಟೂರ್ನಿಯಲ್ಲಿ 18 ತಂಡಗಳು ಭಾಗವಹಿಸಿವೆ. ಶನಿವಾರದ ಪಂದ್ಯಗಳಲ್ಲಿ ಕೊಂಡಿಜಮ್ಮಂಡ ಸೆಮಿ ಫೈನಲ್‍ಗೆ ಪ್ರವೇಶ ಪಡೆಯಿತು. ಆತಿಥೇಯ ಬಲ್ಯಂಡ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಟ್ಟಿದೆ. ನೆರೆಯಂಡಮ್ಮಂಡ, ಬಾನಂಡ, ಆಂಡಮಾಡ, ಅಮ್ಮತ್ತೀರ, ಚೊಟ್ಟೋಳಿಯಮ್ಮಂಡ ಮತ್ತು ಮಂಜುವಂಡ ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.

ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಕೊಂಡಿಜಮ್ಮಂಡ ತಂಡವು ಬಾನಂಡ ತಂಡವನ್ನು 22 ರನ್‌ಗಳಿಂದ ಸೋಲಿಸಿ ಸೆಮಿ ಫೈನಲ್‌ಗೆ ಪ್ರವೇಶ ಪಡೆಯಿತು.

ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಆತಿಥೇಯ ಬಲ್ಯಂಡ ತಂಡವು ಮನ್ನಕಮನೆ ತಂಡದ ವಿರುದ್ದ 47 ರನ್‍ಗಳಿಂದ ಗೆಲುವು ಪಡೆಯಿತು.

ನೆರೆಯಂಡಮ್ಮಂಡ ತಂಡವು ಚೀರಮ್ಮನ ತಂಡವನ್ನು 6 ರನ್‍ಗಳಿಂದ ಸೋಲಿಸಿತು.

ನೆರೆಯಂಡಮ್ಮಂಡ ನಿಗದಿತ 5 ಒವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್ ದಾಖಲಿಸಿತು. ಚೀರಮ್ಮನ ತಂಡ 4 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಬಾನಂಡ ತಂಡವು ಪಾಡಿಯಮ್ಮಂಡ ವಿರುದ್ದ 4 ರನ್‍ಗಳ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT