ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಅಮೃತ ಭಾರತಿಗೆ ಕನ್ನಡದಾರತಿಯ ಸಂಭ್ರಮ

Last Updated 29 ಮೇ 2022, 5:02 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪೊನ್ನಂಪೇಟೆಯಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಶನಿವಾರ ‘ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ ನಡೆಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ 75 ಹೋರಾಟಗಾರರ ಕುಟುಂಬಗಳ ಸದಸ್ಯರಿಗೆ ಸನ್ಮಾನ, 75 ಬಗೆಯ ಹಣ್ಣಿನ ಗಿಡ ನೆಡುವುದು, 75 ದ್ವಿಚಕ್ರ ವಾಹನಗಳ ಜಾಥಾ, 75 ತ್ರಿವರ್ಣಧ್ವಜಗಳ ಹಾರಾಟ, ಶಿಲಾನ್ಯಾಸ ಅನಾವರಣ ನಡೆಯಿತು. ಭಾರತಾಂಬೆ ಮತ್ತು ಸಾವರ್ಕರ್‌ ಭಾವಚಿತ್ರಗಳಿದ್ದ ರಥದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ರಾಮಕೃಷ್ಣ ಶಾರದಾಶ್ರಮದವರೆಗೆ ಎರವರ ದುಡಿ ಕೊಟ್ಟು, ಕೇರಳದ ಚಂಡೆ, ಪೊಲೀಸರ ಬ್ಯಾಂಡ್ ಸೆಟ್, ಪೂರ್ಣಕುಂಭ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ತ್ರಿವರ್ಣ ಧ್ವಜದಲ್ಲಿ ಶೃಂಗಾರಗೊಂಡ ಭಾರತಾಂಬೆಯ ರಥದ ಮೆರವಣಿಗೆ ಸಾಗಿತು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮತ್ತು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕುಶಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿರುವ ಸ್ವಾತಂತ್ರ್ಯ ಹೋರಾಟದ ನೆನಪಿನ ಸ್ತಂಭಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ ಮೈದಾನದಲ್ಲಿ ಗಿಡಗಳನ್ನು ನೆಡಲಾಯಿತು. 1934ರಲ್ಲಿ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಪೊನ್ನಂಪೇಟೆಗೆ ಬಂದು ಉಳಿದಿದ್ದ ನೆನಪಿಗಾಗಿ ರಾಮಕೃಷ್ಣ ಶಾರದಾಶ್ರಮದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಶಾಸಕ ಕೆ.ಜಿ.ಬೋಪಯ್ಯ ಭಾರತಾಂಬೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ಪಾತ್ರದ ಬಗ್ಗೆ ವಕೀಲ ಅ.ಮಾ.ಭಾಸ್ಕರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ಮನೆಯಪಂಡ ನಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ತತ್ವರೂಪನಂದಾಜಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪಿ.ಲಕ್ಷ್ಮಿ, ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ವಿರಾಜಪೇಟೆ ತಹಶೀಲ್ದಾರ್ ಯೋಗಾನಂದ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ತಾಲ್ಲೂಕು ಪಂಚಾಯಿತಿ ಇಒ ಕೊಣಿಯಂಡ ಅಪ್ಪಣ್ಣ, ತಾಲ್ಲೂಕು ಬಗರ್ ಹುಕಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್, ನಿರಂಜನ ರಾಜೇ ಅರಸ್ ಹಾಜರಿದ್ದರು.

75 ಮಂದಿಗೆ ಸನ್ಮಾನ

ಸ್ವಾತಂತ್ರ್ಯ ಹೋರಾಟಗಾರರಾದ ಬಿ.ಜಿ.ಗಣಪಯ್ಯ, ಚಿರಿಯಪಂಡ ಉತ್ತಪ್ಪ, ಕರ್ತಮಾಡ ತಿಮ್ಮಯ್ಯ, ಆಲೇಮಾಡ ಅಪ್ಪಣ್ಣ, ಅಮ್ಮತ್ತಿರ ರಾಮಯ್ಯ, ಮುಲ್ಲೇಂಗಡ ಚಂಗಪ್ಪ, ಸಣ್ಣುವಂಡ ನಂಜಪ್ಪ, ಮಚ್ಚಿಯಂಡ ಎಸ್.ಕಾರ್ಯಪ್ಪ.ಅಚ್ಚಿಯಂಡ ಎಸ್ ಅಪ್ಪಣ್ಣಮಯ್ಯ, ಹೆಚ್.ಅರ್. ಕೃಷ್ಣಯ್ಯ, ಮೂಕಳೇರ ಡಿ. ಕುಶಾಲಪ್ಪ, ಪೊನ್ನಿಮಾಡ ಮಾಚಯ್ಯ, ಚಕ್ಕೇರ ಬಿ. ಮೊಣ್ಣಯ್ಯ, ಕೋದೆಂಗಡ ಜಿ. ಕಾರ್ಯಪ್ಪ, ಕೊಳ್ಳಿಮಾಡ ಕರುಂಬಯ್ಯ, ಕೊಣಿಯಂಡ ಸಿ. ತಿಮ್ಮಯ್ಯ, ಚೊಟ್ಟೆಕಾಳಪಂಡ ಕೆ. ಅಪ್ಪಣ್ಣ, ಕಡೇಮಾಡ ನಂಜಪ್ಪ, ಜಿ.ಕೆ. ದೇವಯ್ಯ, ಸಿ.ಎಂ. ಪೂಣಚ್ಚ, ಎಸ್.ಪಿ. ಬೋಪಯ್ಯ, ಕುಪ್ಪಂಡ ಮುದ್ದಪ್ಪ, ನಾಣಮಯ್ಯ, ಪುತ್ತಮನೆ ಮುದ್ದಮ್ಮಯ್ಯ, ಸುಳ್ಳಿಮಾಡ ಕಾರ್ಯಪ್ಪ, ಕಾಕಮಾಡ ಎನ್. ನಾಣಯ್ಯ, ಅಜ್ಜಿಕುಟ್ಟೀರ ನಂಜಪ್ಪ, ಮುಂಡುಮಾಡ ದೇವಯ್ಯ, ಮಲ್ಚಿರ ಚಂಗಪ್ಪ, ಅಜ್ಜಮಾಡ ಮಾದಪ್ಪ, ತಡಿಯಂಗಡ ಸುಬ್ಬಯ್ಯ, ಕೆ.ಎಂ. ಮಾದಮಯ್ಯ, ಅಲ್ಲುಮಾಡ ಚಿಟ್ಟಿಯಪ್ಪ, ಪೆಮ್ಮಂಡ ದೇವಯ್ಯ, ಕಾಟಿಮಾಡ ಮಾದಪ್ಪ, ಪಿ.ಎ. ಪೊನ್ನಮ್ಮ, ಮಲಚೀರ ಚಿಟ್ಟಿಯಪ್ಪ, ಬಿ.ಜಿ. ಅಲಮೇಲಮ್ಮ, ಮಾರುವಂಗಡ ಕುಶಾಲಪ್ಪ, ವಿ.ಆರ್. ತಮ್ಮಯ್ಯ, ಮಾಚೆಟ್ಟಿರ ಎಂ. ಮುದ್ದಪ್ಪ, ನಾಯಡ ಬೆಳ್ಯಪ್ಪ, ಮಾತಂಡ ಮಂದಪ್ಪ ಕಾರ್ಯಪ್ಪ, ಬಾಚಂಡ ಎಂ. ಮಾದಯ್ಯ, ಬೊಪ್ಪಂಡ ಮಾಚಯ್ಯ, ಮಾಚಿಮಂಡ ಕಾಳಪ್ಪ, ಸೋಮೆಯಂಡ ಅಚ್ಚಪ್ಪ, ಪುಲಿಯಂಡ ಪಿ. ಸುಬ್ಬಯ್ಯ, ಐನಂಡ ಕಾರ್ಯಪ್ಪ, ಮಂಡೆಪಂಡ ಸೋಮಯ್ಯ, ಮನೆಯಪಂಡ ಮಾದಪ್ಪ, ಪೂಜಾರಿ ಕಾಮಪ್ಪ, ಮಲ್ಲೆಂಗಡ ಕೆ. ಮಂದಣ್ಣ, ಮಚ್ಚಿಯಂಡ ಅಯ್ಯಪ್ಪ, ಅಜ್ಜಿಕುಟ್ಟಿರ ಚಿಣ್ಣಪ್ಪ, ಕಡೇಮಾಡ ಅಯ್ಯಣ್ಣ, ಮಾಚಿಮಾಡ ಕುಶಾಲಪ್ಪ, ಚೆಕ್ಕೇರ ಅಪ್ಪಯ್ಯ, ಅಜ್ಜಿಕುಟ್ಟೀರ ಚಿಣ್ಣಪ್ಪ, ಅಜ್ಜಿಕುಟ್ಟೀರ ತಮ್ಮಯ್ಯ, ತೀತಮಾಡ ಭೀಮಯ್ಯ, ತೀತಿರ ಕುಟ್ಟಪ್ಪ, ತೀತಮಾಡ ಮಾದಯ್ಯ, ಚೆಕ್ಕೆರ ಮಾಚಯ್ಯ, ಕೈಬುಲೀರ ಅಪ್ಪಣ್ಣ, ಚೋರಿರ ಮಾದಪ್ಪ, ಮಾಚಮಾಡ ಕುಶಾಲಪ್ಪ, ಕುಂಜಂಗಡ ಸುಬ್ಬಯ್ಯ, ಬಾಚಮಾಡ ಗಣಪತಿ, ಅಳಮೇಂಗಡ ಟಿ. ಮಾಚಯ್ಯ, ಬಾಚೆಟ್ಟೀರ ಎಂ.ಚಿನ್ನಪ್ಪ, ವಿ.ಆರ್. ತಮ್ಮಯ್ಯ, ಎಚ್.ಬಿ. ತಮ್ಮಯ್ಯ, ಎಸ್.ಎನ್. ಈಶ್ವರಯ್ಯ, ಬಾಚಂಡ ಎಂ. ಮಾದಯ್ಯ, ಬಾಜಿ ಅಬ್ದುಲ್ ಗಫೂರ್ ಖಾನ್ ಅವರ ಕುಟುಂಬದ 75 ಸದಸ್ಯರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT