ಶುಕ್ರವಾರ, ಫೆಬ್ರವರಿ 21, 2020
18 °C

ಎರಡು ತಲೆ ಹಾವು ಅಕ್ರಮ ಸಾಗಾಟ: ಆಂಧ್ರದ ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಅಪರೂಪದ ಎರಡು ತಲೆಯ ಹಾವನ್ನು ಸಾಗಿಸುತ್ತಿದ್ದ 5 ಮಂದಿಯನ್ನು ತಾಲ್ಲೂಕಿನ ತಿತಿಮತಿಯ ಚನ್ನಂಗೊಲ್ಲಿಯಲ್ಲಿ ಬಂಧಿಸಿದ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.

ಎರಡು ತಲೆಯ ಹಾವನ್ನು ಸಾಗಿಸುತ್ತಿದ್ದ ಆಂಧ್ರದ ಐವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ಎಲ್ಲರನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಆಂಧ್ರ ಪ್ರದೇಶದಿಂದ ಕೇರಳ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕಾರನ್ನು ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು  ಬುಧವಾರ ಶೋಧಿಸಿದಾಗ ಕಪ್ಪು ಬಿಳಿ ಬಣ್ಣದ ಎರಡು ತಲೆ ಹಾವು ಪತ್ತೆಯಾಗಿದೆ. ಕಾರಿನಲ್ಲಿದ್ದ ಮುಲ್ಲಾ ಮೆಹಬೂಬ್ ವಲಿ, ಶೇಕ್ ಮುಲ್ಲಾ ಚಾಂದ್ ಪಾಶ, ಎಸ್.ಫಯಾಜ್, ಬೋಯಿ ರಂಗಸ್ವಾಮಿ, ಶೇಕ್ ಮೆಹಬೂಬ್ ಪಾಶ ಎಂಬುವರನ್ನು ಬಂಧಿಸಿದ್ದಾರೆ.

ಮಡಿಕೇರಿ ಅರಣ್ಯ ಸಂಚಾರಿ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಸಿಬ್ಬಂದಿ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಎಂ.ಬಿ.ಗಣೇಶ್, ಪಿ.ಬಿ.ಮೊಣ್ಣಪ್ಪ ಹಾಗೂ ಸಿ.ಎಂ.ರೇವಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆರೋಪಿಗಳು ಬೆಂಗಳೂರಿನಲ್ಲಿ ಎರಡು ತಲೆ ಹಾವು ಖರೀದಿಸುವ ಗಿರಾಕಿಯನ್ನು ಗೊತ್ತುಪಡಿಸಿದ ನಂತರ ಹಾವನ್ನು ಆಂಧ್ರದಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದರೆಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಎರಡು ತಲೆ ಹಾವನ್ನು ಮನೆಯಲ್ಲಿ ಸಾಕುವುದರಿಂದ ಸಂಪತ್ತು ದುಪ್ಪಟ್ಟುಗೊಳ್ಳುತ್ತದೆ ಎಂಬ ನಂಬಿಕೆಯಿಂದ ದುಬಾರಿ ಬೆಲೆಗೆ ಒಂದು ವರ್ಗವು ಈ ಹಾವನ್ನು ಖರೀದಿಸುತಿರುವುದಾಗಿ ತಿಳಿದು ಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಎರಡು ತಲೆ ಹಾವಿಗೆ ಸುಮಾರು ಎರಡು ಕೋಟಿ ಮೌಲ್ಯವಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು