ವಿರಾಜಪೇಟೆ: ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಮೀಪದ ಮೂರ್ನಾಡಿನ ಕಾಲೇಜು ಮೈದಾನದಲ್ಲಿ ಈಚೆಗೆ ಆಯೋಜಿಸಿದ್ದ 2ನೇ ವರ್ಷದ ಬಲಿಜ ಸಮಾಜದ ಕ್ರಿಕೆಟ್ ಟೂರ್ನಿಯಲ್ಲಿ ಪೆರುಂಬಾಂಡಿಯ ಫ್ಯಾಂಥರ್ಸ್ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪೆರುಂಬಾಂಡಿಯ ಫ್ಯಾಂಥರ್ಸ್ ತಂಡವು ಫೈನಲ್ಸ್ನಲ್ಲಿ ಬೈಲುಕೊಪ್ಪದ ಆರ್.ಸಿ.ಬಿ ತಂಡವನ್ನು 6 ವಿಕೆಟ್ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬೈಲುಕೊಪ್ಪದ ಆರ್ಸಿಬಿ ತಂಡವು ನಿಗದಿತ 6 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 43 ರನ್ ಗಳಸಿತು. ಗೆಲುವಿಗೆ 44 ರನ್ ಗುರಿ ಬೆನ್ನಟ್ಟಿದ ಪೆರುಂಬಾಡಿಯ ಫ್ಯಾಂಥರ್ಸ್ ತಂಡ ಬಿರುಸಿನ ಆಟವಾಡಿ ಕೇವಲ 3.3 ಓವರ್ಗಳಲ್ಲಿ ತನ್ನ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಇದಕ್ಕು ಮೊದಲು ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ನಾಪೋಕ್ಲುವಿನ ಸ್ಪಾರ್ಟನ್ಸ್ ತಂಡವು ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 6 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತು. ಬದಲಿಗೆ ಪೆರುಂಬಾಡಿಯ ಪ್ಯಾಂಥರ್ಸ್ ತಂಡ 2.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿ ಫೈನಲ್ಗೆ ಪ್ರವೇಶ ಪಡೆಯಿತು.

ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಬೈಲುಕೊಪ್ಪದ ಆರ್ಸಿಬಿ ತಂಡವು 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಕೊಡಗು ಯೂತ್ ವಾರಿಯರ್ಸ್ ತಂಡ 6 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 54 ರನ್ ಗಳಿಸುವ ಮೂಲಕ ಕೇವಲ 4 ರನ್ಗಳಿಂದ ಸೋಲು ಅನುಭವಿಸಿತು.

ವಿಜೇತ ತಂಡವು ಆಕರ್ಷಕ ಟ್ರೋಫಿ ಮತ್ತು ₹15 ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ₹10 ಸಾವಿರ ನಗದು ನೀಡಿ ಗೌರವಿಸಲಾಯಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯ ಜಿಲ್ಲೆಯ ಒಟ್ಟು 8 ತಂಡಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಲಿಜ ಸಮುದಾಯದ ಪ್ರಮುಖರಾದ ಟಿ.ಪಿ. ರಮೇಶ್ ಅವರು, ಸೋಲು-ಗೆಲುವನ್ನು ಕ್ರೀಡೆ ಹಾಗೂ ಬದುಕಿನಲ್ಲಿ ಸಮಾನವಾಗಿ ಸ್ವೀಕರಿಸಬೇಕು. ಸಮುದಾಯದ ಕುಟುಂಬಗಳನ್ನು ಒಂದೂಗೂಡಿಸುವ ಸಲುವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಉದ್ಯಮಿ ರೋಹಿತ್ ಆನಂದ್ ಅವರು ಮಾತನಾಡಿ, ಕ್ರೀಡಾಕೂಟದ ಮುಂದಿನ ಆವೃತ್ತಿಯನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು. ಸಭೆಯನ್ನು ಉದ್ದೇಶಿಸಿ ಮೈಸೂರಿನ ದಯಾನಂದ್ ಮತ್ತು ಸಿದ್ದಾಪುರದ ಮಂಜುನಾಥ್ ಅವರು ಮಾತನಾಡಿದರು. ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಲೋಕನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಟಿ.ಜಿ. ಹರ್ಷ, ಸಮಾಜದ ಪ್ರಮುಖರಾದ ಗಣೇಶ್, ಶ್ರೀನಿವಾಸ್, ವಿಜಯ್ ಕುಮಾರ್, ಚೇತನ್, ಟಿ.ಪಿ. ವಿನೋದ್ ಟಿ.ಜಿ, ತೇಜಸ್ ಟಿ.ವಿ, ಕಾರ್ತಿಕ್, ಪದ್ಮನಾಭ.ಕೆ ಸೇರಿದಂತೆ ಬಲಿಜ ಸಮಾಜದ ಪ್ರಮುಖರು, ಸಮಾಜ ಬಾಂಧವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.