ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪಬೆಟ್ಟ, ನೆಹರೂ ನಗರ ಬೆಟ್ಟದಲ್ಲಿ ಭೂಕುಸಿತದ ಆತಂಕ

ಬೆಟ್ಟಕ್ಕೆ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ಭೇಟಿ
Last Updated 16 ಆಗಸ್ಟ್ 2019, 9:40 IST
ಅಕ್ಷರ ಗಾತ್ರ

ವಿರಾಜಪೇಟೆ: ಭಾರಿ ಮಳೆಯಿಂದ ಪಟ್ಟಣದ ಅಯ್ಯಪ್ಪ ಬೆಟ್ಟ ಹಾಗೂ ನೆಹರೂ ನಗರ ಬೆಟ್ಟದಲ್ಲಿ ಬಿರುಕು ಬಿಟ್ಟಿರುವ ಸ್ಥಳಕ್ಕೆ ಭಾರತೀಯ ಸರ್ವೇಕ್ಷಣಾ ಇಲಾಖೆ ಭೂವಿಜ್ಞಾನಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಕಳೆದ ವಾರ ಸುರಿದ ಭಾರಿ ಮಳೆಗೆ ಈ ಎರಡು ಬೆಟ್ಟಗಳಲ್ಲೂ ಬಿರುಕು ಕಾಣಿಸಿಕೊಂಡು, ಬೆಟ್ಟದ ನಿವಾಸಿಗಳು ಮಾತ್ರವಲ್ಲದೇ ಪಟ್ಟಣದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿನ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಅಯ್ಯಪ್ಪ ಬೆಟ್ಟದಲ್ಲಿ ಸುಮಾರು 25 ಮೀಟರ್‌ ಉದ್ದದ ಬಿರುಕು ಉಂಟಾಗಿದೆ. ಮರಳು ಹಾಗೂ ಸಿಮೆಂಟ್ ಬಳಸಿ ಬಿರುಕನ್ನು ತಾತ್ಕಾಲಿಕವಾಗಿ ಮುಚ್ಚಿ ಬಳಿಕ ಮಳೆಯ ನೀರು ಹೋಗದಂತೆ ತಾಡಪಾಲ್‌ ಹಾಸಲಾಗಿದೆ.

ನೆಹರೂ ನಗರ ಬೆಟ್ಟದಲ್ಲಿನ ಮನೆಯಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದ ಬಿರುಕು ಈ ವರ್ಷ ಮಳೆಯಿಂದ 15ರಿಂದ 20 ಮೀಟರ್‌ ತನಕ ಹೆಚ್ಚಾಗಿರುತ್ತಿದೆ. ಈ ಎರಡೂ ಭಾಗದಲ್ಲಿ ತೊಂದರೆಗೆ ಒಳಗಾದ ಕುಟುಂಬಗಳನ್ನು ಗುರುತಿಸಿ ಈಗಾಗಲೇ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಎಸ್‌ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಟ್ಟದಿಂದ ಹರಿಯುವ ನೀರು ಬಿರುಕು ಬಿಟ್ಟ ಸ್ಥಳದಿಂದ ದೂರದಲ್ಲಿ ಹರಿಯುವಂತೆ ನೋಡಿಕೊಳ್ಳಬೇಕು. ಬೆಟ್ಟದಲ್ಲಿ ವಾಸಿಸುವ ಅಪಾಯದ ಅಂಚಿನಲ್ಲಿರುವ ಎಲ್ಲ ನಿವಾಸಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸು ವಂತೆ ಅವರು ಸಲಹೆ ನೀಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ.ರಾಜೇಶ್, ಸಿ.ಕೆ.ಪೃಥ್ವಿನಾಥ್, ಮಹಮ್ಮದ್ ರಾಫಿ ಸೇರಿದಂತೆ ಸ್ಥಳಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT