ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಪ್ರಿಲ್‌‌‌ನಲ್ಲಿ ಬಾಳೆಕುಟ್ಟಿರ ಕಪ್-2025 ಹಗ್ಗಜಗ್ಗಾಟ 

Published : 2 ಅಕ್ಟೋಬರ್ 2024, 3:59 IST
Last Updated : 2 ಅಕ್ಟೋಬರ್ 2024, 3:59 IST
ಫಾಲೋ ಮಾಡಿ
Comments

ವಿರಾಜಪೇಟೆ: ‘ಕೊಡವ ಕುಟುಂಬಗಳ ನಡುವಿನ ಬಾಳೆಕುಟ್ಟಿರ ಕಪ್-2025 ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ಸಮೀಪದ ಅರಮೇರಿ ಕಳಂಚೇರಿ ವಿದ್ಯಾಪೀಠದ ಮೈದಾನದಲ್ಲಿ ನಡೆಸಲಾಗುವುದು’ ಎಂದು ಕ್ರೀಡಾಕೂಟದ ಅಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡವ ಟಗ್ ಆಫ್ ವಾರ್ ಅಕಾಡಮಿ ಸಹಯೋಗದೊಂದಿಗೆ 4ನೇ ವರ್ಷದ ಹಗ್ಗಜಗ್ಗಾಟ ಕ್ರೀಡಾಕೂಟ ನಡೆಸಲಾಗುತ್ತಿದೆ. ಕುಟುಂಬದ ಸದಸ್ಯರನ್ನು ಒಗ್ಗೂಡಿಸಿ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯ ಹಾಗೂ ಸಹಬಾಳ್ವೆ ನಡೆಸುವ ದೃಷ್ಟಿ ಮುಂದಿಟ್ಟುಕೊಂಡು ಕ್ರೀಡಾಕೂಟ ನಡೆಸಲಾಗುವುದು’ ಎಂದರು.

ಸಮಿತಿಯ ಖಚಾಂಚಿ ರಾಯ್ ಕಾರ್ಯಪ್ಪ ಮಾತನಾಡಿ,‘ಕ್ರೀಡಾಕೂಟದ ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಅ.5ರಂದು ಪಟ್ಟಣದ ಮಲಬಾರ್ ರಸ್ತೆಯ ಖಾಸಗಿ ಸಭಾಂಗಣದಲ್ಲಿ ನಡೆಯಲಿದೆ. ಲಾಂಛನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾಕೂಟದ ಅಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ವಹಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಲೋಗೋ ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಎಂ. ಸುಜಾ ಕುಶಾಲಪ್ಪ, ಕೊಡವ ಟಗ್ ಆಫ್ ವಾರ್ ಅಕಾಡಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಉಪಸ್ಥಿತರಿರುವರು’ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕ್ರೀಡಾ ಸಂಚಾಲಕ ಬಾಳೆಕುಟ್ಟಿರ ದಿನಿ ಬೋಪಯ್ಯ ಮಾತನಾಡಿದರು. ಕ್ರೀಡಾಕೂಟದ ಸದಸ್ಯರಾದ ಗಣು ಕಾವೇರಪ್ಪ, ಸತ್ಯ ಉತ್ತಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT