ಮಂಗಳವಾರ, ಜೂನ್ 28, 2022
26 °C

₹1.26 ಲಕ್ಷ ಮೌಲ್ಯದ ಮಾದಕ ವಸ್ತು ವಶ: ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಗಾಂಜಾ ಮಾರಾಟದ ಆರೋಪದ ಮೇಲೆ ಬ್ಯಾಂಕ್‌ ಉದ್ಯೋಗಿ ಸೇರಿದಂತೆ ಐವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಬಿ.ಬಿ.ಎಂ ವಿದ್ಯಾರ್ಥಿ, ಹೊದವಾಡ ಗ್ರಾಮದ ನಿವಾಸಿ ಮೊಹಮ್ಮದ್‌ ಅಸ್ಲಾಂ (23), ಮಡಿಕೇರಿ ಎಫ್‌.ಎಂ.ಸಿ ಕಾಲೇಜು ಅಂತಿಮ ವರ್ಷದ ಎಚ್‌ಆರ್‌ಡಿ ವಿದ್ಯಾರ್ಥಿ, ನಾಪೋಕ್ಲು ಸಮೀಪದ ಬೇತು ಗ್ರಾಮದ ನಿವಾಸಿ ಕೆ.ಕೆ.ಬೋಪಣ್ಣ (22), ಬೇತು ಗ್ರಾಮದ ಕೃಷಿಕ ಸಿ.ಸಿ.ಅಕ್ಷತ್ (24), ಮಡಿಕೇರಿಯ ಎಸ್‌ಬಿಐ ಬ್ಯಾಂಕ್‌ನ ಖಾತೆ ನಿರ್ವಹಣೆ ಕೆಲಸ ಮಾಡುತ್ತಿದ್ದ, ನಗರದ ಚೈನ್‌ಗೇಟ್‌ ಬಳಿ ಪೋಸ್ಟಲ್‌ ಕ್ವಾಟ್ರರ್ಸ್‌ನಲ್ಲಿ ವಾಸವಿದ್ದ ಸುಮಂತ್‌ (22) ಹಾಗೂ ಪುಟಾಣಿ ನಗರದ ನಿವಾಸಿ, ಪೇಟಿಂಗ್‌ ಕೆಲಸ ಮಾಡುತ್ತಿದ್ದ ರಾಜೇಶ್‌ (22) ಬಂಧಿತರು.

ಬಂಧಿತರಿಂದ ₹1.26 ಲಕ್ಷ ಮೌಲ್ಯದ 750 ಗ್ರಾಂ ಗಾಂಜಾ, 11 ಗ್ರಾಂ ಆ್ಯಂಫೆಟಮೈನ್‌, 0.8 ಗ್ರಾಂ ಎಕ್ಸಿಟೆಸ್ಸಿ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಚೈನ್‌ಗೇಟ್ ಬಳಿ ಐವರು ಗಾಂಜಾ ಖರೀದಿಯ ವಿಚಾರದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಈ ಮಾಹಿತಿ ಆಧರಿಸಿ, ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಸಿಪಿಐ ಪಿ.ವಿ.ವೆಂಕಟೇಶ್‌, ಪಿಎಸ್‌ಐ ಎಂ.ಟಿ.ಅಂತಿಮಾ, ಸಿಬ್ಬಂದಿ ಕೆ.ಕೆ.ದಿನೇಶ್‌, ಎಚ್‌.ಎಸ್‌.ಶ್ರೀನಿವಾಸ್‌, ಬಿ.ಕೆ.ಪ್ರವೀಣ್‌, ನಾಗರಾಜ್‌ ಕಡಗನ್ನವರ್‌, ಅರುಣ್‌ಕುಮಾರ್‌, ಸುನಿಲ್‌, ಕೆ.ಎಂ.ಧರ್ಮ, ಎಲ್‌.ಎಸ್‌.ಶಶಿಕುಮಾರ್‌, ದಿವ್ಯಾ, ಸೌಮ್ಯಾ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು