ಶನಿವಾರ, ಸೆಪ್ಟೆಂಬರ್ 18, 2021
26 °C

ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಇಲ್ಲಿನ ಬಾಳೆಲೆಯಲ್ಲಿ ಶನಿವಾರ ಆಟವಾಡುತ್ತಿದ್ದ ಸಮಯದಲ್ಲಿ ತ್ರಿನೇಶ್ (4)ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಬಾಳೆಲೆ ಕೊಪ್ಪಲು ಗ್ರಾಮದ ಮಹೇಶ್ ಕುಮಾರ್ ಎಂಬವರ ಮಗನಾದ ಬಾಲಕ ತ್ರಿನೇಶ್ ಮಧ್ಯಾಹ್ನ ಮೂವರು ಮಕ್ಕಳೊಂದಿಗೆ ಮನೆಯ ಸಮೀಪದಲ್ಲಿ ಇರುವ ಗದ್ದೆ ಬಯಲಿನ ಕೆರೆಯ ಬಳಿ ಆಟವಾಡಲು ತೆರಳಿದ್ದಾನೆ. ಈ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ನೋಡಿದ ಇತರ ಬಾಲಕರು ಓಡಿ ಬಂದು ಪೋಷಕರಿಗೆ ತಿಳಿಸಿದ್ದಾರೆ. ಕೂಡಲೆ ಕೆರೆಯ ಬಳಿ ಹೋಗುಷ್ಟರಲ್ಲಿ ಬಾಲಕ ಮುಳುಗಿ ಪ್ರಾಣ ಬಿಟ್ಟಿದ್ದ. ವಿಷಯ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಶುಕ್ರವಾರವಷ್ಟೇ ಬಾಲಕ ತ್ರಿನೇಶ್ ಬಿಳಿಕೆರೆಯ ಅಜ್ಜಿ ಮನೆಯಿಂದ ಬಾಳೆಲೆಗೆ ಬಂದಿದ್ದ ಎಂದು ಬಾಲಕನ ತಂದೆ ಮಹೇಶ್ ಕುಮಾರ್ ದುಃಖ ತೋಡಿಕೊಂಡರು. ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ಬಾಳೆಲೆಯಲ್ಲಿ ಶವ ಸಂಸ್ಕಾರ ನೆರವೇರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು