ನಿರ್ಮಾಣ ಹಂತದ ಕಟ್ಟಡ ಕುಸಿತ: ಇಬ್ಬರ ರಕ್ಷಣೆ, ಅವಶೇಷಗಳಡಿ ಇಬ್ಬರು

7

ನಿರ್ಮಾಣ ಹಂತದ ಕಟ್ಟಡ ಕುಸಿತ: ಇಬ್ಬರ ರಕ್ಷಣೆ, ಅವಶೇಷಗಳಡಿ ಇಬ್ಬರು

Published:
Updated:

ಮಡಿಕೇರಿ: ನಗರದ ಗೌಳಿಬೀದಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಗುಡ್ಡದ ಮಣ್ಣು ಕುಸಿದು ಅವಶೇಷಗಳ ಅಡಿ ಸಿಲುಕಿದ್ದ ನಾಲ್ವರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಸುಬ್ಬಯ್ಯ ಅವರಿಗೆ ಸೇರಿದ ಕಟ್ಟಡದ ಬಳಿ ಮಂಗಳವಾರ ಮಣ್ಣು ಕುಸಿದಿದೆ.

ಅಗ್ನಿಶಾಮಕ ಹಾಗೂ ಪೊಲೀಸರು‌ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ಗೌರಮ್ಮ ಹಾಗೂ ವೆಂಕಟೇಶ್ ಅವರನ್ನು ರಕ್ಷಣೆ ಮಾಡಲಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮಣ್ಣಿನ ಅಡಿ ಸಿಲುಕಿರುವ ಮತ್ತಿಬ್ಬರ ರಕ್ಷಣಾ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 3

  Sad
 • 2

  Frustrated
 • 3

  Angry

Comments:

0 comments

Write the first review for this !