ಬುಧವಾರ, ಆಗಸ್ಟ್ 10, 2022
23 °C

ಶನಿವಾರಸಂತೆ: ಆತಂಕ ಮೂಡಿಸಿದ್ದ ಗೂಳಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಬೆಳೆ ನಾಶಪಡಿಸುತ್ತಾ ಮಕ್ಕಳು-ಮಹಿಳೆಯರೆನ್ನದೆ ಜನರ ಮೇಲೆ ದಾಳಿ ಮಾಡುತ್ತಾ ಪುಂಡಾಟ ನಡೆಸಿ ಭಯ ಹುಟ್ಟಿಸಿದ್ದ ವಾರಸುದಾರರಿಲ್ಲದ ಗೂಳಿಯನ್ನು ಕೂಗೂರು ಗ್ರಾಮಸ್ಥರು ಹಿಡಿದು ಮೈಸೂರಿನ ಗೋಶಾಲೆ ಪಿಂಜರಾಪೋಲ್‌ಗೆ ಕಳುಹಿಸಿದರು.

ಗೌಡಳ್ಳಿ, ಕೂಗೂರು, ಬೀಟಿಕಟ್ಟೆ, ಕೋಟೆಯೂರು, ಹೆಗ್ಗಳ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ಗೂಳಿ ಇತ್ತೀಚೆಗೆ ಗ್ರಾಮಗಳಲ್ಲಿ ಬಹಳ ದಾಂದಲೆ ನಡೆಸುತ್ತಿತ್ತು. ಗ್ರಾಮಸ್ಥರು ಹಾಗೂ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯಕರ್ತರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ ಬಳಿಕ ಪಿಡಿಒ ಲಿಖಿತಾ ಗೂಳಿಯನ್ನು ಸಾಗಿಸಲು ಅನುಮತಿ ಪತ್ರ ನೀಡಿದರು.

ಗೂಳಿ ಹಿಡಿಯಲು ಕೂಗೂರು ಗ್ರಾಮಸ್ಥರಾದ ಸುಮಂತ್, ಲೋಕೇಶ್, ಚಂದ್ರಶೇಖರ್, ದಯಾನಂದ್, ಸಿಂಚನ್, ಶಿವಕುಮಾರ್, ಅರ್ಜುನ್, ಕರುಣ್, ಹೂವಯ್ಯ, ಸಂದೀಪ್, ಅಶ್ವಥ್, ಮಿಲನ್ ಸಹಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.