15ರಂದು ಜಿಲ್ಲಾ ಬ್ಯಾರಿ ಸಮಾವೇಶ

7

15ರಂದು ಜಿಲ್ಲಾ ಬ್ಯಾರಿ ಸಮಾವೇಶ

Published:
Updated:

ಮಡಿಕೇರಿ: ಕೊಡಗು ಬ್ಯಾರೀಸ್ ವೆಲ್‌ಫೇರ್ ಟ್ರಸ್ಟ್‌ ವತಿಯಿಂದ ಜ.15ರಂದು ನಗರದ ಕಾವೇರಿ ಹಾಲ್‌ನಲ್ಲಿ ಜಿಲ್ಲಾ ಬ್ಯಾರಿ ಸಮಾವೇಶ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎ. ಷಂಶುದ್ದೀನ್ ತಿಳಿಸಿದ್ದಾರೆ.

ಸಮಾವೇಶದ ಅಂಗವಾಗಿ ಜ.6ರಂದು ಕ್ರೆಸೆಂಟ್ ಶಾಲಾ ಮೈದಾನದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಚಾಲನೆ ನೀಡಲಿದ್ದಾರೆ.

ಕ್ರಿಕೆಟ್‌ ಟೂರ್ನಿ: ಜ. 12, 13ರಂದು ನಗರದ ಜನರಲ್‌ ತಿಮ್ಮಯ್ಯ ಕ್ರಿಡಾಂಗಣದಲ್ಲಿ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಇದಕ್ಕೆ ಮಡಿಕೇರಿ ಸಿಪಿಐ ಅನುಪ್‌ ಮಾದಪ್ಪ ಚಾಲನೆ ನೀಡಲಿದ್ದಾರೆ.

ಸಮಾವೇಶದಲ್ಲಿ 10 ಮಂದಿ ಬ್ಯಾರಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. 30 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಜ.10ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಮೊಬೈಲ್‌: 94800 83264 ಸಂಪರ್ಕಿಸಬಹುದು ಎಂದು ಷಂಶುದ್ದೀನ್ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !