ಹುಬ್ಬಳ್ಳಿಯ ಗಿರಿಯಾಲದ ವೆಂಕಪ್ಪ ಪುಲಿ ಅವರು 13ನೇ ವಯಸ್ಸಿನಲ್ಲಿಯೇ ಗೆಳೆಯರ ಜೊತೆ ಸೇರಿ ಮೇಳ ಕಟ್ಟಿದ್ದರು. ಅನೇಕ ವರ್ಷಗಳಿಂದ ಕರಡಿವಾದನವನ್ನು ಪ್ರದರ್ಶಿಸುತ್ತಿದ್ದಾರೆ. ‘ತಲೆಗೆ ಹಳದಿ ರುಮಾಲು, ನೆಹರೂ ಅಂಗಿ, ಬಿಳಿಯ ಪಂಚೆ, ನಡುಕಟ್ಟು, ಕಿರೀಟಧಾರಿಯಾಗಿ ಕರಡಿಮಜಲನ್ನು ಹೊತ್ತು ಈ ಕಲೆಯನ್ನು ಪ್ರದರ್ಶಿಸುತ್ತೇವೆ’ ಎಂದು ಕಲೆಯ ಕುರಿತು ಹೇಳಿದರು.