ಮಡಿಕೇರಿ: ಕೊಡವ ಮಹಿಳೆಯರ ಸಬಲೀಕರಣಕ್ಕೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆಯ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾನುವಾರ ಪ್ರತಿಭಟನೆ ನಡೆಸಿ, ವಿವಿಧ ಹಕ್ಕೋತ್ತಾಯಗಳನ್ನು ಮಂಡಿಸಿದರು.

ಈ ವೇಳೆ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ,‘ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಂವಿಧಾನದತ್ತವಾದ ಹಕ್ಕುಗಳನ್ನು ನೀಡಬೇಕು. ದೇಶಾದ್ಯಂತ ಕೊಡವ ಮಹಿಳೆಯರಿಗೆ ಶೇ 33 ಮೀಸಲಾತಿ ಆಂತರಿಕ ಕೋಟಾದಡಿ ನೀಡಬೇಕು’ ಎಂದು ಒತ್ತಾಯಿಸಿದರು.

ಕೊಡವ ಮಹಿಳೆಯರು ಉತ್ತಮ ಕೃಷಿಕರಾಗಿರುವುದರಿಂದ ವಿಶೇಷ ಕಾಳಜಿಯಾಗಿ ತಲಾ 10 ಎಕರೆಯಂತೆ ಕಾಫಿ ಜಮೀನಿನ ಗುತ್ತಿಗೆ ಆಸ್ತಿಯನ್ನು ಒದಗಿಸಬೇಕು. ಸಂಸತ್ತು, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಸಂದರ್ಭ ಕೊಡವ ಮಹಿಳೆಯರಿಗೆ ಆಂತರಿಕ ಕೋಟಾವನ್ನು ನೀಡಬೇಕು ಎಂದು ಆಗ್ರಹಿಸಿದರು.

ಸಂಸತ್ತಿನ ಕಲಾಕೃತಿಗಳು, ಗ್ಯಾಲರಿಗಳು ಅಥವಾ ಸಾಂಸ್ಕೃತಿಕ ಪ್ರದರ್ಶನಗಳಲ್ಲಿ ಕೊಡವ ಮಹಿಳೆಯರ ಶೌರ್ಯ, ಕೃಷಿ ಸಂಸ್ಕೃತಿ ಮತ್ತು ಅವರ ವಿಶಿಷ್ಟ ಉಡುಗೆಯಾದ ‘ಕೊಡವ ಸೀರೆ’ಯ (ಹಿಮ್ಮಡಿ ಉಡುಗೆ) ಚಿತ್ರಣವನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.

ಕೊಡವತಿ ವಧುವಿಗೆ ‘ಪತ್ತಾಕ್ ಭಾಗ್ಯ’ ಎಂಬುದು ಕಲ್ಯಾಣ ರಾಜ್ಯ ಯೋಜನೆಯ ‘ಸಪ್ತಪದಿ ಭಾಗ್ಯ’ಕ್ಕೆ ಸಮವಾಗಿರುತ್ತದೆ. ಕೊಡಗಿನ ಬಹುಪಾಲು ಹಳ್ಳಿಗಳಲ್ಲಿ, ವಧುವಿನ ಬಡ ಕೊಡವ ಪೋಷಕರು ಮದುವೆ ಸಮಾರಂಭಕ್ಕಾಗಿ ತಾತ್ಕಾಲಿಕವಾಗಿ ಇತರರ ‘ಪತ್ತಾಕ್’ ಅನ್ನು ಎರವಲು ಪಡೆಯುತ್ತಿದ್ದು, ಇದು ಶೋಚನೀಯವಾಗಿದೆ. ಆದ್ದರಿಂದ ಬಡ ಕೊಡವತಿ ವಧುವಿಗೆ ‘ಪತ್ತಾಕ್ ಭಾಗ್ಯ’ ನೀಡಬೇಕು ಎಂದರು.

ಗರ್ಭಿಣಿ ಕೊಡವ ಮಹಿಳೆಯರಿಗೆ ‘ಕೂಪದಿ ಕೂಳ್’ ಎಂದು ಸಹಾಯ ಮಾಡಲು ಪೌಷ್ಟಿಕಾಂಶದ ಆಹಾರ ನೀಡುವ ವಿಶಿಷ್ಟ ವ್ಯವಸ್ಥೆಯನ್ನು ಅನುಸರಿಸುತ್ತಿರುವುದರಿಂದ, ಸರ್ಕಾರ ‘ಸೀಮಂತ ಭಾಗ್ಯ’ ಯೋಜನೆಯನ್ನು ಕೊಡವತಿ ಗರ್ಭಿಣಿಯರಿಗೆ ‘ಕೂಪದಿ ಕೂಳ್ ಭಾಗ್ಯ’ ಎಂದು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಕೊಡವರ ಇತಿಹಾಸವನ್ನು ತಿರುಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನೈಜ ಇತಿಹಾಸವನ್ನು ಮರುಸ್ಥಾಪಿಸಬೇಕು ಎಂದೂ ಒತ್ತಾಯಿಸಿದರು.

ಮುಖಂಡರಾದ ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತಾ ಗಿರೀಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ರೇಖಾ ನಾಚಪ್ಪ, ಅರೆಯಡ ಸವಿತಾ ಗಿರೀಶ್, ಮುದ್ದಿಯಡ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಬಾಚರಣಿಯಂಡ ಚಿಪ್ಪಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.