ಬುಧವಾರ, ಅಕ್ಟೋಬರ್ 16, 2019
21 °C

ಇಂಗ್ಲೆಂಡ್‌ ಆಟಗಾರನಿಂದ ಸುಂಟಿಕೊಪ್ಪದ ಮಕ್ಕಳಿಗೆ ತರಬೇತಿ

Published:
Updated:
Prajavani

ಸುಂಟಿಕೊಪ್ಪ: ಇಂಗ್ಲೆಂಡಿನ ಫುಟ್‌ಬಾಲ್ ಆಟಗಾರ ಹಾಗೂ ತರಬೇತುದಾರ ಇಯಾನ್ ಷೆಲಿ ಅವರು ಮಂಗಳವಾರ ಸಮೀಪದ ಗದ್ದೆಹಳ್ಳದ ಆಮ್ಮೆಟ್ಟಿ ಯೂತ್ ಕ್ಲಬ್ ಮೈದಾನದಲ್ಲಿ ಇಲ್ಲಿಯ ಮಕ್ಕಳಿಗೆ ಫುಟ್‌ಬಾಲ್ ಬಗ್ಗೆ ಕೆಲ ಸಲಹೆ, ತಂತ್ರಗಳನ್ನು ಹೇಳಿ ಕೊಟ್ಟರಲ್ಲದೇ, ಅವರೊಂದಿಗೆ ಕೆಲಹೊತ್ತು ಆಟವಾಡಿ ತಮ್ಮ ಕ್ರೀಡಾಸ್ಫೂರ್ತಿ ಪ್ರದರ್ಶಿಸಿದರು.

ಇಯಾನ್ ಷೆಲಿ, ಮಕ್ಕಳಿಗೆ ಸ್ಫೂರ್ತಿ ನೀಡಿದರಲ್ಲದೆ, ಕ್ರೀಡಾಪಟುಗಳು ಉತ್ತಮವಾದ ದೇಹದಾರ್ಢ್ಯವನ್ನು ಹೊಂದಿ ಕಠಿಣ ಪರಿಶ್ರಮದ ಮೂಲಕ ಕ್ರೀಡೆಯಲ್ಲಿ ಉನ್ನತ ಹಂತ ಸಾಧಿಸಬೇಕು ಎಂದು ಸಲಹೆ ನೀಡಿದರು.

ಅವರು ಕುಶಾಲನಗರದ ಬಳಿಯ ಗುಡ್ಡೆಹೊಸೂರಿನ ಐಎನ್‌ಎಸ್ ಕ್ರೀಡಾ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಫುಟ್‌ಬಾಲ್ ತರಬೇತಿ ನೀಡಲು ಅಲ್ಲಿಗೆ ಬಂದಿದ್ದಾರೆ. ಬಿಡುವಿನ ಸಮಯದಲ್ಲಿ ಸುಂಟಿಕೊಪ್ಪದ ಕ್ರೀಡಾಪಟುಗಳಿಗೂ ಆಟದ ಕೌಶಲವನ್ನು ಕಲಿಸಿದರು.

ಅಕಾಡೆಮಿಯ ಮುಖ್ಯಸ್ಥ ಪೊನ್ನಪ್ಪ, ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಉಪಾಧ್ಯಕ್ಷ ಪಿ.ಕೆ.ಜಗದೀಶ್ ರೈ, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಸಿ.ದಿನೇಶ್, ಸುಂಟಿಕೊಪ್ಪದ ಪಿಡಿಒ ವೇಣುಗೋಪಾಲ್ ಇದ್ದರು.

ಇದೇ ಸಂದರ್ಭ ಶಾಲಾ ಮಕ್ಕಳು, ಯುವಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
 

Post Comments (+)