ಮಡಿಕೇರಿ: ಅಮೆರಿಕ– ಇರಾನ್ ನಡುವಿನ ಯುದ್ಧದ ಬಿಸಿ ಇದೀಗ ಕಾಫಿ ಉದ್ಯಮಕ್ಕೂ ತಟ್ಟಲಾರಂಭಿಸಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಕೊರತೆ ಹಾಗೂ ಪಶ್ಚಿಮ ಏಷ್ಯಾ ದೇಶಗಳಿಗೆ ಕಾಫಿ ರಫ್ತುನಲ್ಲಿ ವ್ಯತ್ಯಯವಾಗಿರುವುದು ಕಾಫಿ ವಲಯವನ್ನು ಸಂಕಷ್ಟಕ್ಕೆ ದೂಡಿವೆ.

ಕಾಫಿ ಹಾಗೂ ಅದನ್ನು ಅವಲಂಬಿಸಿರುವ ಕೈಗಾರಿಕೋದ್ಯಮವು ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನೇ ಅವಲಂಬಿಸಿದೆ. ಕಾಫಿ ರೋಸ್ಟಿಂಗ್ ಮಾಡಲು ಅನಿಲ ಸಿಲಿಂಡರ್ಗಳು ಅತ್ಯಗತ್ಯ. ಸದ್ಯ ಕೈಗಾರಿಕೆಗಳು ದಾಸ್ತಾನಿರುವ ಸಿಲಿಂಡರ್ಗಳನ್ನು ಬಳಸುತ್ತಿವೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳು ಸಿಗದಿದ್ದರೆ ಕಾಫಿ ಪುಡಿ ತಯಾರಿಕೆ ಸ್ಥಗಿತಗೊಳ್ಳಲಿದೆ.

‘ಹಡಗುಗಳ ಮೂಲಕ ಕಾಫಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಾರಂಭಿಸಿದೆ. ರಫ್ತಾಗುವ ಕಾಫಿ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಉದ್ಯಮಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಹಡಗು ಸಂಚಾರದ ಮೇಲೆ ಕಾಫಿ ಉದ್ಯಮ ಬಹುಪಾಲು ಅವಲಂಬಿತವಾಗಿದೆ. ಈ ಎರಡಕ್ಕೂ ವ್ಯತ್ಯಯವಾಗಿರುವುದರಿಂದ ಸಹಜವಾಗಿಯೆ ಕಾಫಿ ಮೇಲೆ ಪರಿಣಾಮ ಬೀರಲಿದೆ’ ಎಂದು ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.