ಮಡಿಕೇರಿ: ವಿವಿಧ ಸ್ಪರ್ಧೆ ವಿಜೇತರು

7

ಮಡಿಕೇರಿ: ವಿವಿಧ ಸ್ಪರ್ಧೆ ವಿಜೇತರು

Published:
Updated:

ಮಡಿಕೇರಿ: ಸಮರ್ಥ ಕನ್ನಡಿಗ ಸಂಸ್ಥೆಯ ಆಶ್ರಯದಲ್ಲಿ ಈಚೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದರ ವಿವರ ಈ ಕೆಳಕಂಡಂತೆ ಇದೆ.

1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗದ ವಚನ ಗಾಯನ ಸ್ಪರ್ಧೆ, 8 ರಿಂದ10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಆಶುಭಾಷಣ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಭಾವಗೀತೆ ಸ್ಪರ್ಧೆ ಹಾಗೂ ಕನ್ನಡ ಜಾಗೃತಿ ಕವಿಗೋಷ್ಠಿ, ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧಾ ವಿಜೇತರು: ಜಾನಪದ ನೃತ್ಯ ಸ್ಪರ್ಧೆ–ಸೇಂಟ್ ಜೋಸೆಫ್‌ ಶಾಲೆಯ ಕಾವೇರಿ ತಂಡ (ಪ್ರಥಮ) ಶಿಫಾ ತಂಡ (ದ್ವಿತೀಯ), ಪ್ರಜ್ಞಾ ಕಲಾ ಶಾಲೆಯ ರಿಷಿಕಾ ನೇತೃತ್ವದ ತಂಡ ( ತೃತೀಯ) ಸ್ಥಾನ ಪಡೆದುಕೊಂಡಿದೆ.

ವಚನ ಗಾಯನ ಸ್ಪರ್ಧೆ: ಶೋಧನಾ (ಪ್ರಥಮ), ಎಸ್.ಸಪ್ನಾ ಶೇಟ್ (ದ್ವಿತೀಯ), ಬಿ.ಜಿ. ಸಾಕ್ಷಿ (ದ್ವಿತೀಯ), ಪ್ರಜ್ಞಾ ಶೆಟ್ಟಿ (ದ್ವಿತೀಯ), ಎಂ.ಡಿ.ಪೂರ್ವಿ (ತೃತೀಯ), ಲಕ್ಷ, ಪದ್ಮಪ್ರಿಯ, ಮೇನಿತ ನಾಗೇಶ್, ಪವನ್ -ಸಮಾಧಾನಕರ ಬಹುಮಾನ.

ಆಶುಭಾಷಣ ಸ್ಪರ್ಧೆ: ಆಶುತೋಷ್ (ಪ್ರಥಮ), ಚಿಂತನ (ದ್ವಿತೀಯ), ಸಂಧ್ಯಾ (ತೃತೀಯ). ಭಾವಗೀತೆ ಸ್ಪರ್ಧೆ: ಚೇತಾ ವಿವೇಕ್ (ಪ್ರಥಮ), ಅಪರ್ಣಾ ಭಾರದ್ವಾಜ್ (ದ್ವಿತೀಯ), ಶಿವ (ತೃತೀಯ). ಪ್ರಬಂಧ ಸ್ಪರ್ಧೆ: ಹೇಮಾವತಿ (ಪ್ರಥಮ), ಶ್ರೀಲತಾ, ಮೇಘನಾ (ದ್ವಿತೀಯ), ನಳಿನಿ (ತೃತೀಯ).

ಕವನ ರಚನಾ ಸ್ಪರ್ಧೆ: ವಿಶ್ವನಾಥ್ ದೇರಳಕಟ್ಟೆ (ಪ್ರಥಮ), ಕೆ.ಪಿ. ಭಾರತಿ (ದ್ವಿತೀಯ), ದಿಲೀಪ್ ಕಡಬ (ತೃತೀಯ).

ಸಮರ್ಥ ಕನ್ನಡಿಗರು ಗೌರವಾರ್ಪಣೆ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪತ್ರಕರ್ತ ಎಚ್.ಟಿ.ಅನಿಲ್ (ಮಾಧ್ಯಮ ಕ್ಷೇತ್ರ), ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ (ಯಕ್ಷಗಾನ ಮತ್ತು ಕಲೆ, ಸಾಹಿತ್ಯ ಕ್ಷೇತ್ರ), ಒಡಿಯಂಡ ಎಸ್. ಚಿಂಗಪ್ಪ (ದೇಶ ಸೇವೆ), ಕೃಷ್ಣೇಗೌಡ (ಪ್ರಗತಿಪರ ಕೃಷಿ), ಮುಮ್ತಾಜ್ (ಮಹಿಳಾ ಮತ್ತು ಮಕ್ಕಳ ಸಬಲೀಕರಣ ಕ್ಷೇತ್ರ), ಟೋಮಿ ಥೋಮಸ್ (ಕನ್ನಡ ಕಲಿಕೆ ಹಾಗೂ ಜಾಗೃತಿ ಕ್ಷೇತ್ರ), ಎಂ.ಎಚ್. ಮೊಹಮ್ಮದ್ ಮುಸ್ತಫ್‌ (ಮಾನವೀಯ ಸೇವಾ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರಾದ ಜಿ.ರಾಜೇಂದ್ರ, ಮಂಜುನಾಥ್‌, ಬಿಎಸ್‌ಎನ್‌ಎಲ್‌ ನಿವೃತ್ತ ಅಧಿಕಾರಿ ಎಸ್.ಎಂ. ದೇವರಾಜು, ಸಮರ್ಥ ಕನ್ನಡಿಗ ಸಂಸ್ಥೆಯ ಕೊಡಗು ಘಟಕದ ಪ್ರಧಾನ ಸಂಚಾಲಕಿ ಕೆ. ಜಯಲಕ್ಷ್ಮಿ, ರಾಜ್ಯ ಗೌರವ ಸಲಹೆಗಾರ ಲಿಂಗೇಶ್ ಹುಣಸೂರು, ಸಮಿತಿ ಸದಸ್ಯರಾದ ಆನಂದ್ ದೆಗ್ಗನಹಳ್ಳಿ, ಪಿ.ಎಸ್.ವೈಲೇಶ್, ಬಸವರಾಜು ಎಸ್. ಕಲ್ಲುಸಕ್ಕರೆ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !