ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಭೂಪರಿವರ್ತನೆ ವಿರುದ್ಧ ಮುಂದುವರಿದ ಹೋರಾಟ

ಕೊಡವ ನ್ಯಾಷನಲ್ ಕೌನ್ಸಿಲ್‌ನಿಂದ ಚೇರಂಬಾಣೆಯಲ್ಲಿ ಮಾನವ ಸರಪಳಿ ರಚನೆ
Published : 11 ಸೆಪ್ಟೆಂಬರ್ 2024, 5:24 IST
Last Updated : 11 ಸೆಪ್ಟೆಂಬರ್ 2024, 5:24 IST
ಫಾಲೋ ಮಾಡಿ
Comments

ಮಡಿಕೇರಿ: ಕೊಡಗಿನಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿದಿದೆ.

ಸಂಘಟನೆಯ ಮುಖಂಡರು ಚೇರಂಬಾಣೆಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಕೊಡಗು ಅತಿ ಸೂಕ್ಷ್ಮ ಪರಿಸರವನ್ನು ಹೊಂದಿದೆ. ಇಂತಹ ಜಿಲ್ಲೆಯಲ್ಲಿ ಯಾವುದೇ ಪೂರ್ವಾಪ‍ರ ಯೋಚಿಸದೇ, ಅವೈಜ್ಞಾನಿಕವಾಗಿ ಗಾಜಿನ ಸೇತುವೆಗಳ ನಿರ್ಮಾಣಕ್ಕೆ ಅನುಮತ ನೀಡಬಾರದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.

ಅವೈಜ್ಞಾನಿಕವಾದ ಇಂತಹ ಯೋಜನೆಗಳಿಂದ ಕೊಡಗು ನರಕವಾಗಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿನ ಪರಿಸರದ ಕುರಿತು ಅತೀವ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ‘ಕೊಡವ ಲ್ಯಾಂಡ್’ ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಸಿಎನ್‍ಸಿ ವತಿಯಿಂದ ಸೆ.16 ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.

ಕಲ್ಮಾಡಂಡ ದಮಯಂತಿ, ಕಲ್ಮಾಡಂಡ ರೀಟ, ಮಂದಪಂಡ ರಮ್ಯಾ, ಕಲ್ಮಾಡಂಡ ಕವಿತಾ, ಕೇಕಡ ಗಂಗೆ ಅಪ್ಪಣ್ಣ, ಪಟ್ಟಮಾಡ ಸೀತಮ್ಮ, ತೇಲಪಂಡ ಶೈಲ, ಅಳಮಂಡ ಜೈ, ಅಜ್ಜಿನಂಡ ಪಾಪಣ್ಣ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಚೀಯಬೇರ ಸೋಮಣ್ಣ, ಬೊಳ್ಳಾರ್ಪಂಡ ಪೂವಯ್ಯ, ಕಾಡಂಡ ಅಪ್ಪಸಾಮಿ, ಬೊಳ್ಳಾರ್ಪಂಡ ಸಾಬು, ಬಾಚರಣಿಯಂಡ ಹ್ಯಾರಿ, ಪಟ್ಟಮಾಡ ಮುತ್ತಣ್ಣ, ಮಂದಪಂಡ ಸೂರಜ್, ಕೇಕಡ ತಮ್ಮಯ್ಯ, ಪಟ್ಟಮಾಡ ಅಶೋಕ್, ಮಣೋಟಿರ ಚಂದನ್ ಭಾಗವಹಿಸಿದ್ದರು.

ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಂಗಳವಾರ ಚೇರಂಬಾಣೆಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು
ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಂಗಳವಾರ ಚೇರಂಬಾಣೆಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT