ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ವಾಲಿಬಾಲ್ ಸ್ಪರ್ಧೆಯಲ್ಲಿ ಕೂಗೂರು ತಂಡ ಪ್ರಥಮ

ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಕಸರುಗದ್ದೆ ಕ್ರೀಡಾಕೂಟ
Published : 6 ಆಗಸ್ಟ್ 2024, 7:30 IST
Last Updated : 6 ಆಗಸ್ಟ್ 2024, 7:30 IST
ಫಾಲೋ ಮಾಡಿ
Comments

ಸೋಮವಾರಪೇಟೆ: ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶಾಂತಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ 9ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ ಕೂಗೂರು ಬಾಯ್ಸ್ ತಂಡ ಪ್ರಥಮ ಮತ್ತು ತಾಕೇರಿ ತಂಡ ದ್ವಿತೀಯ ಸ್ಥಾನ ಪಡೆದವು.

ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸಂಪಾಜೆ ತಂಡ ಪ್ರಥಮ, ಸೋಮವಾರಪೇಟೆ ರಾಕ್ ಸ್ಟಾರ್ ತಂಡ ದ್ವಿತೀಯ, ಮಹಿಳೆಯರ ಹಗ್ಗಾ ಜಗ್ಗಾಟ ಸ್ಪರ್ಧೆಯಲ್ಲಿ ಹಾನಗಲ್ಲು ಗ್ರಾಮದ ಸರಸ್ವತಿ ಯುವತಿ ಮಂಡಳಿ ಪ್ರಥಮ, ಶಾಂತಳ್ಳಿ ಕುಮಾರಲಿಂಗೇಶ್ವರ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರಿಗೆ ನಡೆದ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗ್ಯ ಟೀಮ್ ಪ್ರಥಮ ಮತ್ತು ಮಸಗೋಡು ಮಹಿಳೆಯರ ತಂಡ ದ್ವಿತೀಯ ಸ್ಥಾನ ಪಡೆಯಿತು.

ಪ್ರೇಕ್ಷಕರನ್ನು ರಂಜಿಸಿದ ಗಂಡ ಹೆಂಡತಿಯನ್ನು ಹೆಗಲಮೇಲೆ ಹೊತ್ತುಕೊಂಡು ಓಡುವ ಸ್ಪರ್ಧೆಯಲ್ಲಿ ಮೂದ್ರವಳ್ಳಿ ಗ್ರಾಮದ ಪೂಜಾ ರಾಕೇಶ್ ಪ್ರಥಮ, ಶಾಂತಳ್ಳಿ ಲೇಖಾ ಕುಮಾರ್ ದ್ವಿತೀಯ ಸ್ಥಾನ ಪಡೆದರು. ಕೆಸರುಗದ್ದೆ ಓಟದ ಮಹಿಳೆಯರ ವಿಭಾಗದಲ್ಲಿ ಶಾಂತಳ್ಳಿ ಜಯಪ್ರದ ಮೇದಪ್ಪ ಪ್ರಥಮ, ಡಾ. ಅಮೂಲ್ಯ ದ್ವಿತೀಯ, ಪುರುಷರ ವಿಭಾಗದಲ್ಲಿ ವಿಕ್ರಂ ಸಾಗರ್ ಪ್ರಥಮ, ಎಚ್.ಡಿ. ತೇಜಸ್ವಿ ದ್ವಿತೀಯ, ವಯಸ್ಕರ ಮಹಿಳೆಯರ ವಿಭಾಗದಲ್ಲಿ ಹರ್ಷಿತ್ ಪ್ರಥಮ, ನಿಶಾ, ಮತ್ತು ವಿದ್ಯಾ ದ್ವಿತೀಯ, ಪುರುಷರ ವಿಭಾಗದಲ್ಲಿ ಸುನಿಲ್ ಕುಶಾಲಪ್ಪ ಪ್ರಥಮ, ಎಂ.ಎಸ್. ರಾಜಶೇಖರ್ ದ್ವಿತೀಯ ಸ್ಥಾನ ಪಡೆದರು.

ಪ್ರಾಥಮಿಕ ಶಾಲೆಯ ಬಾಲಕಿಯರ ಓಟದ ಎರಡು ವಿಭಾಗದಲ್ಲಿ ಲಿಶಾನ್ ಮತ್ತು ಅನನ್ಯ ಪ್ರಥಮ, ನಮನಗೌಡ ಮತ್ತು ಕೃತಿಕಾ ದ್ವಿತೀಯ, ಬಾಲಕರ ಎರಡು ವಿಭಾಗದಲ್ಲಿ ಚಿರಾಗ್ ಮತ್ತು ಶಮಿಕ್ ಪ್ರಥಮ, ಜನಿಕ್ ಮತ್ತು ಇಂದ್ರೇಶ್ ದ್ವಿತೀಯ, ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಚಂದ್ರಶೇಖರ್ ಪ್ರಥಮ, ಅಶಿಕ್ ಕಾರ್ಯಪ್ಪ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಧನ್ಯ ಪ್ರಥಮ, ಮೌಲ್ಯ ದ್ವಿತೀಯ, ಪಿಯುಸಿ ಬಾಲಕಿಯರ ವಿಭಾಗದಲ್ಲಿ ಜೀವಿತ ಪ್ರಥಮ, ಹಸ್ತವಿ ದ್ವಿತೀಯ, ಬಾಲಕರ ವಿಭಾಗದಲ್ಲಿ ಚೇತನ್ ಪ್ರಥಮ, ದೀಪಕ್ ದ್ವಿತೀಯಾ ಸ್ಥಾನ ಪಡೆದರು.

ತಾಲ್ಲೂಕು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಕೆ.ಬಿ. ಸುರೇಶ್, ಸ್ಥಾಪಕ ಅಧ್ಯಕ್ಷ ಬಿ.ಜೆ. ದೀಪಕ್, ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಪ್ರಮುಖರಾದ ಎಸ್.ಜಿ.ಮೇದಪ್ಪ, ಗೌಡಳ್ಳಿ ಪೃಥ್ವಿ, ಚೌಡ್ಲು ಯೋಗೇಂದ್ರ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT