ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರಕ್ಕೆ ಝಾಗಲ್‌ ವಹಿವಾಟು ವಿಸ್ತರಣೆ

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ವಹಿವಾಟಿನ ಉದ್ದೇಶಕ್ಕೆ ಗ್ರಾಹಕರು ಮತ್ತು ಕಾರ್ಪೊರೇಟ್‌ಗಳು ಮಾಡುವ ವೆಚ್ಚ ಮತ್ತು ಪಾವತಿಗಳ ಮಧ್ಯೆ ಸಂಪರ್ಕ ಕಲ್ಪಿಸುವ ಝಾಗಲ್‌ ಸಂಸ್ಥೆಯು ಈಗ ಸಿಂಗಪುರಕ್ಕೂ ತನ್ನ ವಹಿವಾಟು ವಿಸ್ತರಣೆ ಮಾಡಿದೆ.

ದೇಶದಲ್ಲಿ ಸದ್ಯಕ್ಕೆ 10 ಕಚೇರಿಗಳನ್ನು ಹೊಂದಿರುವ ಝಾಗಲ್ ಸಂಸ್ಥೆಯು, 2500 ಕ್ಕೂ ಹೆಚ್ಚು ಕಾರ್ಪೊರೇಟ್ ಗ್ರಾಹಕರನ್ನು, 2.5 ಲಕ್ಷ ಬಳಕೆದಾರರನ್ನು ಹೊಂದಿದೆ.

ಇವರೆಲ್ಲ ಸಂಸ್ಥೆಯ ಆ್ಯಪ್‌ ಬಳಸುತ್ತಿದ್ದಾರೆ. ಕಂಪನಿಯು ಇದುವರೆಗೆ ಮಾರುಕಟ್ಟೆಯಲ್ಲಿ 7.5 ಲಕ್ಷ ಗಿಫ್ಟ್ ಕಾರ್ಡ್‍ಗಳನ್ನು ವಿತರಿಸಿದೆ. ಮುಂದಿನ 5 ವರ್ಷಗಳಲ್ಲಿ ತನ್ನ ವ್ಯವಹಾರವನ್ನು ₹ 6,500 ಕೋಟಿಗಳಿಗೆ ಹೆಚ್ಚಿಸುವ ಗುರಿ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT