ಕೊಡಗಿನಲ್ಲಿ ನಾಲ್ಕು ದಿನಕ್ಕೆ ದಸರಾ ರಜೆ ಸೀಮಿತ

7

ಕೊಡಗಿನಲ್ಲಿ ನಾಲ್ಕು ದಿನಕ್ಕೆ ದಸರಾ ರಜೆ ಸೀಮಿತ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ದಸರಾ ರಜೆಯನ್ನು ನಾಲ್ಕು ದಿನಗಳಿಗೆ ಸೀಮಿತ ಪಡಿಸಿ ಆದೇಶ ಹೊರಡಿಸಲಾಗಿದೆ. ಮಳೆಯಿಂದ ಈ ಹಿಂದೆ 20 ದಿನಗಳ ರಜೆ ನೀಡಲಾಗಿತ್ತು. ಹೀಗಾಗಿ, ರಜೆ ಅವಧಿಯನ್ನು ಕಡಿತ ಮಾಡಲಾಗಿದೆ.

ಆ.17ರಿಂದ 21ರ ತನಕ ರಜೆ ನೀಡಲು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಳೆಯಿಂದ ಅರ್ಧ ವರ್ಷದ ಪಠ್ಯಗಳು ಬಾಕಿ ಉಳಿದಿದ್ದವು. ಮಳೆ ನಿಂತ ಬಳಿಕ ಶನಿವಾರವೂ ಪೂರ್ಣ ದಿನ ತರಗತಿ ನಡೆಸಲಾಗುತ್ತಿತ್ತು. ಈಗ ದಸರಾ ರಜೆಯನ್ನೂ ಕಡಿತ ಮಾಡಿ ತರಗತಿ ನಡೆಸಲು ನಿರ್ಧರಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !