ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಮಳೆಯ ನಡುವೆ ಕ್ರೀಡಾ ಕಲರವ

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ, ಕೂಡಿಗೆ, ಮಡಿಕೇರಿಯಲ್ಲಿ ಆಯೋಜನೆ
Last Updated 12 ಸೆಪ್ಟೆಂಬರ್ 2022, 11:09 IST
ಅಕ್ಷರ ಗಾತ್ರ

ಕುಶಾಲನಗರ/ಮಡಿಕೇರಿ: ಬೀಳುತ್ತಿದ್ದ ಮಳೆಯ ನಡುವೆ ಭಾನುವಾರ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹುಮ್ಮಸ್ಸಿನಿಂದ ಕ್ರೀಡಾಪುಟಗಳು ಭಾಗವಹಿಸಿ ಗಮನ ಸೆಳೆದರು. ಕುಶಾಲನಗರದ ಕೂಡಿಗೆ ಹಾಗೂ ಮಡಿಕೇರಿಯಲ್ಲಿ ಎರಡು ವರ್ಷಗಳ ನಂತರ ಈ ಕ್ರೀಡಾಕೂಟ ನಡೆದಿದ್ದು ವಿಶೇಷ ಎನಿಸಿತ್ತು. ಕಳೆದೆರಡು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಿಂದ ಈ ಕ್ರೀಡಾಕೂಟ ನಡೆದಿರಲಿಲ್ಲ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಭಾನುವಾರ ಕೂಡಿಗೆ ಕ್ರೀಡಾ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟ ಸಹಕಾರಿ ಎಂದು ಹೇಳಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಕಾರ್ಯಕ್ರಮ ಉದ್ಘಾಟಿಸಿ, ‘ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಬೇಕು’ ಎಂದು ಶುಭ ಹಾರೈಸಿದರು.

ಸಾರ್ವಜನಿಕ ಶಿಕ್ಷಕ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಕೂಡುಮಂಗಳೂರು ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮ್ ಕುಮಾರ್, ಕ್ರೀಡಾ ಶಾಲಾ ಮುಖ್ಯ ಶಿಕ್ಷಕ ದೇವಕುಮಾರ್, ಮೇಲ್ವಿಚಾರಕ ಜಯರಾಮ್, ತರಬೇತುದಾರರಾದ ವೆಂಕಟೇಶ್, ಸುರೇಶ್, ಅಂಥೋಣಿ ಡಿಸೋಜ, ಮಂಜುನಾಥ್, ದಿನಮಣಿ ಇದ್ದರು.

ಇದೇ ಸಂದರ್ಭ ಕ್ರೀಡಾ ತರಬೇತುದಾರರ ವೆಂಕಟೇಶ್, ಜಯರಾಂ, ಮಂಜುನಾಥ್, ಸುರೇಶ್, ದಿನಮಣಿ, ಮಹಾಬಲ, ಗಣಪತಿ ಅವರನ್ನು ಗೌರವಿಸಲಾಯಿತು.

ಫಲಿತಾಂಶ

ವಾಲಿಬಾಲ್ (ಪುರುಷರು): ಕುಶಾಲನಗರ (ಪ್ರಥಮ), ಮಡಿಕೇರಿ (ದ್ವಿತೀಯ)

ಹಾಕಿ (ಮಹಿಳೆಯರ ವಿಭಾಗ): ಭಾರತೀಯ ಕ್ರೀಡಾ ಪ್ರಾಧಿಕಾರ (ಪ್ರ), ಪೊನ್ನಂಪೇಟೆ

ಹಾಕಿ (ಪುರುಷರ ವಿಭಾಗ): ಸರ್ಕಾರಿ ಕ್ರೀಡಾ ಪ್ರೌಢಶಾಲೆ ಕೂಡಿಗೆ (ಪ್ರ), ಕುಶಾಲನಗರ (ದ್ವಿ)

ಪುರುಷರ ಕೊಕ್ಕೊ: ವಿರಾಜಪೇಟೆ (ಪ್ರ), ಕುಶಾಲನಗರ ತಂಡ (ದ್ವಿ)

ಫುಟ್‌ಬಾಲ್‌: ಕುಶಾಲನಗರ (ಪ್ರ) ಮಡಿಕೇರಿ (ದ್ವಿ)

ಬಾಲ್ ಬ್ಯಾಡ್ಮಿಂಟನ್ ಪುರುಷರ ವಿಭಾಗ: ಕುಶಾಲನಗರ (ಪ್ರ), ಮಹಿಳೆಯರ ವಿಭಾಗ: ಸೋಮವಾರಪೇಟೆ ಗೌಡಳ್ಳಿ (ಪ್ರ)

ಅಥ್ಲೆಟಿಕ್ಸ್:

100 ಮೀಟರ್‌ ಓಟ: ಸಿಂಚನಾ(ಪ್ರ), ಚೊಂದಮ್ಮ (ದ್ವಿ)

200 ಮೀಟರ್ ಓಟ: ಸುಷ್ಮಿತಾ (ಪ್ರ), ನೀದು (ದ್ವಿ)

400 ಮೀಟರ್ ಓಟ: ವಿದ್ಯಾ ಭಟ್ (ಪ್ರ), ಬಿನೀತಾ (ದ್ವಿ)

800 ಮೀಟರ್ ಓಟ: ಶ್ರೀರಕ್ಷಾ (ಪ್ರ), ಮಿತಾಲಿ ನಾಯಕ (ದ್ವಿ)

1,500 ಮೀಟರ್ ಓಟ: ಸ್ನೇಹಾ (ಪ್ರ), ಗಾಯತ್ರಿ (ದ್ವಿ)

3,000 ಮೀಟರ್: ಪ್ರಗತಿ (ಪ್ರ), ನಮಿತಾ (ದ್ವಿ)

ಉದ್ದ ಜಿಗಿತ: ನೀತು (ಪ್ರ), ಲಾವಣ್ಯ (ದ್ವಿ)

ಎತ್ತರ ಜಿಗಿತ: ಪಲ್ಲವಿ (ಪ್ರ), ಲ್ಯಾಕ್ಮಿ (ದ್ವಿ)

ತ್ರಿವಿಧ ಜಿಗಿತ: ವಿನುತಾ (ಪ್ರ) , ಲಹರಿ (ದ್ವಿ)

100 ಮೀಟರ್ ಅಡೆತಡೆ ಓಟ: ಫಾತಿಮತ್‌ (ಪ್ರ), ಸಹನಾ (ದ್ವಿ)

ಮಹಿಳೆಯರ ರಿಲೇ 4*100 ಮೀಟರ್: ಅಭಿಶ್ವರ, ಅಮೃತ, ಭಾವನಾ, ಸಂಜನಾ

ಪುರುಷರ ವಿಭಾಗ:

100 ಮೀಟರ್: ಸುದ್ದಿನ್ (ಪ್ರ) ಪ್ರಶಾಂತ್ (ದ್ವಿ)

200 ಮೀಟರ್: ರೋಹಿತ್ (ಪ್ರ) ಸಂಜು (ದ್ವಿ)

400 ಮೀಟರ್: ಆಸಿಫ್ (ಪ್ರ), ಸಂಜು (ದ್ವಿ)

800 ಮೀಟರ್: ಕೈಫ್ (ಪ್ರ) ದೀಕ್ಷಿತ್ (ದ್ವಿ)

1500 ಮೀಟರ್: ನಿಶಾಂತ್ (ಪ್ರ) ಮುರುಳಿಧರ್ (ದ್ವಿ)

5,000 ಸಾವಿರ ಮೀಟರ್: ನಿತಿನ್ (ಪ್ರ), ಭೀಮಶಂಕರ್ (ದ್ವಿ)

ಉದ್ದ ಜಿಗಿತ: ಕೌಶಿಕ್ (ಪ್ರ) ಶರತ್ (ದ್ವಿ)

ಎತ್ತರ ಜಿಗಿತ: ಮೌಶಿಕ್ (ಪ್ರ), ರಕ್ಷಿತ್ (ದ್ವಿ)

ತ್ರಿವಿಧ ನೆಗೆತ: ಪುನೀತ್ (ಪ್ರ), ತೇಜಸ್ (ದ್ವಿ)

ಅಡೆತಡೆ ಓಟ: ಆದರ್ಶ್ (ಪ್ರ), ದಿಗಂತ್ (ದ್ವಿ)

ರಿಲೇ 4*100 ಮೀಟರ್: ಆರ್ಯ, ಕೃತನ್, ರಜತೇಶ್, ಸಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT