ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸಂಚಾರ ಮಾರ್ಗ ಬದಲಾವಣೆ

ದಸರೆಗೆ ಸಜ್ಜಾದ ಮಂಜಿನ ನಗರಿ
Last Updated 5 ಅಕ್ಟೋಬರ್ 2022, 8:38 IST
ಅಕ್ಷರ ಗಾತ್ರ

ಮಡಿಕೇರಿ: ಅ. 5ರಂದು ಮಡಿಕೇರಿಯಲ್ಲಿ ದಸರಾ ಉತ್ಸವ ನಡೆಯುವುದರ ಪ್ರಯುಕ್ತ ಅಂದು ಸಂಜೆ 4 ಗಂಟೆಯಿಂದ ಅ. 6ರಂದು ಬೆಳಿಗ್ಗೆ 8 ಗಂಟೆಯವರೆಗೆ ವಾಹನ ಸಂಚಾರದ ಮಾರ್ಗದಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಆದೇಶ ಹೊರಡಿಸಿದ್ದಾರೆ.

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮತ್ತು ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆ
ಕಟ್ಟೆ ಕಡೆಯಿಂದ ಎ.ವಿ.ಶಾಲೆ, ಮುತ್ತಪ್ಪ ದೇವಸ್ಥಾನ ಮುಂದೆ ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ
ನಿಲುಗಡೆಗೊಳಿಸಬೇಕು. ನಂತರ, ಎಸ್.ಪಿ ಕಚೇರಿ ಜಂಕ್ಷನ್, ಮುಂದೆ ಐಟಿಐ ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ ಕಾಲೇಜು
ಮೈದಾನದಲ್ಲಿಯೂ ವಾಹನಗಳನ್ನು ನಿಲ್ಲಿಸಬಹುದು.

ಸಿದ್ದಾಪುರ, ವಿರಾಜಪೇಟೆ, ಮೂರ್ನಾಡು ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳನ್ನು ಆರ್.ಎಂ.ಸಿ ಯಾರ್ಡ್ ಮೈದಾನದಲ್ಲಿ ಹಾಗೂ ಚೈನ್‍ಗೇಟ್ ಮೂಲಕ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ, ಗಾಳಿಬೀಡು ಅಬ್ಬಿಪಾಲ್ಸ್, ಕಾಲೂರು ಕಡೆಯಿಂದ ಬರುವ ವಾಹನಗಳು ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸಬೇಕು

ಮೈಸೂರು, ಸಿದ್ದಾಪುರ, ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಎಂಡ್ ಹೋಟೆಲ್ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನ, ನಗರದಲ್ಲಿರುವ ಗಣಪತಿ ಬೀದಿ, ಮಹದೇವಪೇಟೆ ನಿವಾಸಿಗಳು ತಮ್ಮ ವಾಹನಗಳನ್ನು ಕ್ರಸೆಂಟ್ ಶಾಲೆಯ ಮೈದಾನದಲ್ಲಿ ನಿಲ್ಲಿಸಬೇಕು.

ಕಾಲೇಜು ರಸ್ತೆ, ಕೊಹಿನೂರು ರಸ್ತೆ ಮತ್ತು ನಗರದ ಮಧ್ಯಭಾಗದಲ್ಲಿರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸದೇ ಹಿಂದುಸ್ಥಾನಿ ಶಾಲೆಯ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ವಾಹನ ಸಂಚಾರ ನಿರ್ಬಂಧ

ಅ. 5ರಂದು ಸಂಜೆ 4 ಗಂಟೆಯಿಂದ 6ರಂದು ಬೆಳಿಗ್ಗೆ 8 ಗಂಟೆಯವರೆಗೆ ನಗರದೊಳಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ನಗರದೊಳಗೆ ಇರುವ ಎಲ್ಲಾ ರಸ್ತೆಗಳನ್ನು ನಿಲುಗಡೆ ರಹಿತ ರಸ್ತೆಗಳೆಂದು ಘೋಷಿಸಲಾಗಿದೆ.

ಕೆ.ಎಸ್.ಆರ್.ಟಿ.ಸಿ ಬಸ್‌ಗಳು ತಾತ್ಕಾಲಿಕವಾಗಿ ಕೆಎಸ್‍ಆರ್‌ಟಿಸಿ ಡಿಪೋವನ್ನೇ ಬಸ್ ನಿಲ್ದಾಣವಾಗಿ ಮಾರ್ಪಾಡಿಸಿಕೊಳ್ಳಬೇಕು. ಅವಶ್ಯವಿದ್ದಲ್ಲಿ ಆರ್.ಎಂ.ಸಿ. ಯಾರ್ಡ್‍ನದನೂ ಬಳಸಿಕೊಳ್ಳಬಹುದು ಮತ್ತು ನಗರದೊಳಗೆ ಸಂಚರಿಸದಂತೆ ವ್ಯವಸ್ಥೆ
ಮಾಡಿಕೊಳ್ಳಬೇಕು. ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು
ಮಾಡಿಕೊಡಬೇಕು.

ಖಾಸಗಿ ಬಸ್‌ಗಳು ನಗರದೊಳಗೆ ಆಗಮಿಸದೇ ಜಿ.ಟಿ ವೃತ್ತದಲ್ಲಿಯೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ತೆರಳುವುದು ಮತ್ತು ಖಾಸಗಿ ಬಸ್‌ ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡುವುದು.

ಗೋಣಿಕೊಪ್ಪಲು ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ

ವಿರಾಜಪೇಟೆ ಕಡೆಯಿಂದ ಬರುವ ವಾಹನಗಳನ್ನು ಮೈಸೂರು ಕಡೆಗೆ ಹೋಗಲು ಕೈಕೇರಿ ಕಳತ್ಮಾಡ್ ಜಂಕ್ಷನ್‍ನಿಂದ ಅತ್ತೂರು ಜಂಕ್ಷನ್‍ಗಾಗಿ ಪಾಲಿಬೆಟ್ಟ ರಸ್ತೆಗೆ ಬಂದು ಮೈಸೂರು ರಸ್ತೆಗೆ ಹೋಗಬೇಕು. ಮೈಸೂರು ಕಡೆಯಿಂದ ಬರುವ ವಾಹನಗಳನ್ನು ವೀರಾಜಪೇಟೆ ಕಡೆಗೆ ಹೋಗಲು ತಿತಿಮತಿಯಿಂದ ಪಾಲಿಬೆಟ್ಟ- ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಗೆ ಹೋಗಬೇಕು.

ಪೊನ್ನಂಪೇಟೆ ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನಗಳು ಪೊನ್ನಂಪೇಟೆಯಿಂದ ಪೊನ್ನಪ್ಪಸಂತೆ-
ಕೋಣನಕಟ್ಟೆ-ತಿತಿಮತಿ ಮಾರ್ಗವಾಗಿ ಹೋಗಬೇಕು. ಮೈಸೂರಿನಿಂದ ಪೊನ್ನಂಪೇಟೆ, ಶ್ರೀಮಂಗಲ ಕಡೆ
ಹೋಗುವ ವಾಹನಗಳು ತಿತಿಮತಿ- ಕೋಣನಕಟ್ಟೆ- ಪೊನ್ನಪ್ಪಸಂತೆ-ನಲ್ಲೂರು-ಕಿರುಗೂರು ಮಾರ್ಗವಾಗಿ
ಹೋಗಬೇಕು.

ವಿರಾಜಪೇಟೆಯಿಂದ ಪೊನ್ನಂಪೇಟೆ, ಶೀಮಂಗಲ ಕಡೆಗೆ ಹೋಗುವ ವಾಹನಗಳು ಹಾತೂರು ಜಂಕ್ಷನ್‍ನಿಂದ ಕುಂದಾ ಮಾರ್ಗವಾಗಿ ಪೊನ್ನಂಪೇಟೆ ಕಡೆಗೆ ಹೋಗಬೇಕು. ಪೊನ್ನಂಪೇಟೆ ಕಡೆಯಿಂದ ವಿರಾಜಪೇಟೆಗೆ ಹೋಗುವ ವಾಹನಗಳು ಕುಂದಾ, ಹಾತೂರು ಮಾರ್ಗವಾಗಿ ಹೋಗಬೇಕು.

ವಾಹನ ನಿಲುಗಡೆ
* ವಿರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ ಕಾವೇರಿ ಕಾಲೇಜು ಮೈದಾನ

* ಮೈಸೂರು ಕಡೆಯಿಂದ ಬರುವ ವಾಹನಗಳಿಗೆ ಆರ್.ಎಂ.ಸಿ ಆವರಣದ ಒಳಭಾಗ

* ಪಾಲಿಬೆಟ್ಟ ರಸ್ತೆ ಕಡೆಯಿಂದ ಬರುವ ವಾಹನಗಳಿಗೆ ಕಾಪ್ಸ್ ಶಾಲೆ ಎಂಟ್ರೆನ್ಸ್ ರಸ್ತೆಯಿಂದ ಹಿಂದಕ್ಕೆ ರಸ್ತೆ ಬದಿ

* ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ
ಬದಿ

ಭಾರಿ ವಾಹನ ಸಂಚಾರ ನಿಷೇಧ

ಅ. 5 ರಂದು ಮಧ್ಯಾಹ್ನ 2 ಗಂಟೆಯಿಂದ 6ರಂದು ಬೆಳಿಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಭಾರಿ ವಾಹನ (ಟ್ಯಾಂಕರ್, ಕ್ಯಾಂಟರ್, ಸರಕು ಸಾಗಾಣಿಕೆ ಲಾರಿ)ಗಳ
ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ತೆರಳುವ ಭಾರಿ ವಾಹನಗಳು
ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಸಕಲೇಶಪುರ, ಮೈಸೂರು ಮಾರ್ಗವಾಗಿ, ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಭಾರಿ ವಾಹನಗಳನ್ನು ಬಿಳಿಕೆರೆ, ಕೆ.ಆರ್.ನಗರ, ಹೊಳೆನರಸೀಪುರ, ಹಾಸನ ಮಾರ್ಗವಾಗಿ ಸಂಚರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT