ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ | ಗಾಡ್ಗೀಳ್ ವರದಿ ಜಾರಿಗೆ ತರಲು ಆಗ್ರಹ

ಸಿಇಐ (ಎಂ) ರಾಜ್ಯ ಸಮಿತಿ ಸದಸ್ಯ ಎಚ್.ಈ. ಸಣ್ಣಪ್ಪ
Published : 13 ಆಗಸ್ಟ್ 2024, 4:15 IST
Last Updated : 13 ಆಗಸ್ಟ್ 2024, 4:15 IST
ಫಾಲೋ ಮಾಡಿ
Comments

ಸೋಮವಾರಪೇಟೆ: ‘ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾದವ ಗಾಡ್ಗೀಳ್ ವರದಿಯನ್ನು ಕೆಲವರ ಹಿತಕಾಯುವ ನಿಟ್ಟಿನಲ್ಲಿ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ’ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ( ಮಾರ್ಕ್ಸ್ ಮತ್ತು ಲೆನಿನ್ ವಾದಿ) ದೂರಿತು.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಚ್.ಈ. ಸಣ್ಣಪ್ಪ ಮಾತನಾಡಿ, ‘ದೇಶದ ಪಶ್ಚಿಮಘಟ್ಟ ವ್ಯಾಪ್ತಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಗುಜರಾತ್ ತಪ್ಪಲಿನವರೆಗೆ 5 ರಾಜ್ಯಗಳಲ್ಲಿ ಹರಡಿದೆ. ಇದರ ಉದ್ದ ಸುಮಾರು 1600 ಕಿಲೋಮೀಟರ್ ಮತ್ತು 16 ರಿಂದ 210 ಕಿಲೋಮೀಟರ್ ಹಗಲ ವ್ಯಾಪಿಸಿದ್ದು, ಎತ್ತರ 2400 ಅಡಿ ಇದೆ. ಕೇಂದ್ರದ ಯುಪಿಎ ಸರ್ಕಾರ 2010ರಲ್ಲಿ ಪರಿಸರ ವಿಜ್ಞಾನಿ ಗಾಡ್ಗೀಳ್ ಅವರನ್ನು ನೇಮಕ ಮಾಡಿ ವರದಿ ನೀಡಲು ತಿಳಿಸಿತ್ತು. ಅದರಂತೆ ಸೂಕ್ಷ್ಮ, ಅತಿ ಸೂಕ್ಷ್ಮ ವಲಯಗಳೆಂದಿ ವಿಂಗಡಿಸಿ ಸಮಗ್ರ ವರದಿ ನೀಡಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾದವ ಗಾಡ್ಗೀಳ್ ವರದಿ ಯಥಾವತ್ತಾಗಿ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

 ‘ಸರ್ಕಾರಗಳು ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಪಾಡಲು ಮುಂದಾಗಿದ್ದು, ವರದಿ ಜಾರಿಗೆ ತರಲು ಮೀನಾಮೇಷ ಎಣಿಸುತ್ತಿವೆ. ನಂತರ ಬಾಹ್ಯಾಕಾಶ ತಜ್ಞ ಕಸ್ತೂರಿರಂಗನ್ ಅವರನ್ನು ನೇಮಕ ಮಾಡಿ ಮತ್ತೊಂದು ವರದಿ ನೀಡಲು ತಿಳಿಸಿತ್ತು. ಅದರಂತೆ 1600 ಕಿಲೋ ಮೀಟರ್ ಸೂಕ್ಷ್ಮ ಪ್ರದೇಶವನ್ನು 1000 ಕಿಲೋ ಮೀಟರ್‌‌‌ಗೆ ತಂದು ನಿಲ್ಲಸಿದ್ದರೂ, ಅದನ್ನು ಜಾರಿಗೆ ತರಲು ಸರ್ಕಾರಗಳು ಮುಂದಾಗದೆ, ಕೆಲವು ಕಾರ್ಪೋರೇಟ್ ಸಂಸ್ಥೆಗಳು, ಗಣಿಗಾರಿಕೆ, ಮರಳು ಮಫಿಯ, ಟಿಂಬರ್, ಸಣ್ಣ ಕೈಗಾರಿಕೆ ಹಿತ ಕಾಯುತ್ತಿವೆ’ ಎಂದು ಆರೋಪಿಸಿದರು.

‘ಮುಂದಿನ ಪೀಳಿಗೆಗೆ ಅರಣ್ಯ ಉಳಿಸಿದಲ್ಲಿ ಮಾತ್ರ ಅವರು ಸುರಕ್ಷಿತ ಜೀವನ ನಡೆಸಲು ಸಾಧ್ಯ. ಎಲ್ಲಿಯವರೆಗೆ ಪ್ರಕೃತ್ತಿ ಮೇಲೆ ಮಾನವ ಹಸ್ತಕ್ಷೇಪ ನಿಲ್ಲಿಸುವುದಿಲ್ಲವೋ, ಅಲ್ಲಿಯ ತನಕ ಕೇರಳದ ವಯನಾಡಿನಲ್ಲಾದ ಅನಾಹುತಗಳು ಮುಂದುವರೆಯುತ್ತವೆ. ವರದಿ ಜಾರಿಗೆ ತಂದು ಮುಂದಿನ ಪೀಳಿಗೆಗೂ ಅನುಕೂಲವಾಗುವಂತೆ ಮಾಡಬೇಕು’ಎಂದರು.

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಕೇರಳದ ದುರಂತವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ದುರಂತ ಎಂದು ಘೊಷಣೆ ಮಾಡುವ ಮೂಲಕ ಅಲ್ಲಿನವರ ನೆರವಿಗೆ ಮುಂದಾಗಬೇಕು. ಮಾದವ ಗಾಡ್ಗೀಳ್ ವರದಿ ಕೂಡಲೇ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು. ಗೋಷ್ಟಿಯಲ್ಲಿ ಪ್ರಮುಖರಾದ ಎನ್.ಟಿ. ಚಂಗಪ್ಪ, ಎಚ್.ಜಿ. ಜಯಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT