ಜಮೀನು ಮಾರಿದರೆ ಮತ್ತೆ ಸಂಕಷ್ಟ

7
ಚರ್ಚ್‌ ಸೈಡ್‌ ಸಭಾಂಗಣದಲ್ಲಿ ಸಂತ್ರಸ್ತರಿಗೆ ನೆರವು ವಿತರಣೆ

ಜಮೀನು ಮಾರಿದರೆ ಮತ್ತೆ ಸಂಕಷ್ಟ

Published:
Updated:
Deccan Herald

ಮಡಿಕೇರಿ: ‘ಕೊಡಗು ಜಿಲ್ಲೆಯ ಭೂ ಮಾಲೀಕರು ಹೊರಗಿನವರಿಗೆ ತಮ್ಮ ಜಮೀನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು’ ಎಂದು ನಿವೃತ್ತ ಮೇಜರ್ ನಂಜಪ್ಪ ಕೋರಿದರು.

ನಗರದ ಹೋಟೆಲ್‌ ಚರ್ಚ್ ಸೈಡ್ ಸಭಾಂಗಣದಲ್ಲಿ ಸಂತ್ರಸ್ತರಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ ಹಾಗೂ ಕೊಡಗು ವನ್ಯಜೀವಿ ಸಂಘದಿಂದ ನೆರವು ವಿತರಿಸಿ ಅವರು ಮಾತನಾಡಿದರು. 

ಪ್ರಕೃತಿ ವಿಕೋಪದಿಂದ ಯಾರು ಎದೆಗುಂದಬಾರದು. ಕೆಲವು ಶಕ್ತಿಗಳು ನಮ್ಮ ಆಸ್ತಿಗೆ ಹೆಚ್ಚು ಹಣ ನೀಡುವ ಆಮಿಷವೊಡ್ಡಿ ಭೂಮಿ ಕಬಳಿಸುವ ತಂತ್ರ ಮಾಡುತ್ತಿದ್ದಾರೆ. ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಕೋರಿದರು.

ಕೊಡಗು ಸಹ ದುರಂತದಿಂದ ಹೊರಬಂದು ಶಕ್ತಿಶಾಲಿ ನಾಡು ಆಗಬೇಕಿದೆ. ನಮ್ಮ ಸಂಘವು ನಿರಾಶ್ರಿತರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿವೆ. ಮುಂದೆಯೂ ಈ ನಿಟ್ಟಿನಲ್ಲಿ ನಿರಾಶ್ರಿತರೊಂದಿಗೆ ಕೈ ಜೋಡಿಸಲಿದೆ ಎಂದು ಹೇಳಿದರು.

ಸಂಘ– ಸಂಸ್ಥೆಗಳ ನೆರವು, ಪರಿಹಾರ ಸಾಮಗ್ರಿ ನೈಜ ನಿರಾಶ್ರಿತರಿಗೆ ಮುಟ್ಟುತ್ತಿಲ್ಲ ಎಂದು ದೂರಿದರು.

ಕೊಡವ ಸಮಾಜದೊಂದಿಗೆ ಸೇರಿ ಭಾರತೀಯ ಸೇನೆಗೆ ಸೇರುವ ವಿದ್ಯಾರ್ಥಿಗಳಿಗೆ ಎರಡು ದಿನಗಳ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಭೂಮಿ ಮೇಲೆ ಪ್ರೀತಿ ಮೂಡಿಸಿದ್ದಲ್ಲಿ ನಮ್ಮ ಮಕ್ಕಳು ಮರಳಿ ತಾಯಿನೆಲಕ್ಕೆ ಆಗಮಿಸುತ್ತಾರೆ. ಜೇನು ಕೃಷಿ, ಹೈನುಗಾರಿಕೆಯ ತರಬೇತಿ ನೀಡಲು ಆಲೋಚಿಸಲಾಗಿದೆ ಎಂದು ಹೇಳಿದರು. ಮುಖಂಡರಾದ ಉಳ್ಳಿಯಡ ಎಂ ಪೂವಯ್ಯ, ಜಯಚಂದ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !