ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕೋಸಿಗಾಗಿ ದೌಡಾಯಿಸಿದ ಜನರು

Last Updated 9 ಏಪ್ರಿಲ್ 2020, 13:18 IST
ಅಕ್ಷರ ಗಾತ್ರ

ಕುಶಾಲನಗರ: ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ರೈತ ಚಂದ್ರಶೆಟ್ಟಿ ಅವರು ಬೆಳೆದಿದ್ದ ಎಲೆಕೋಸು ಅನ್ನು ಉಚಿತವಾಗಿ ಜನರಿಗೆ ತೆಗೆದುಕೊಂಡು ಹೋಗಲು ಗುರುವಾರ ಅವಕಾಶ ಮಾಡಿಕೊಟ್ಟರು.

ಬ್ಯಾಡಗೊಟ್ಟ, ಮದಲಾಪುರ, ಹೆಗ್ಡಳ್ಳಿ, ಕೊಪ್ಪಲು, ಹಳೆಕೂಡಗಿ, ಭುವನಗಿರಿ ಮುಂತಾದ ಗ್ರಾಮಗಳ ಜನರು ಕೊರೊನಾ ಭೀತಿಯನ್ನು ಲೆಕ್ಕಿಸದೆ ಹೊಲಕ್ಕೆ ಲಗ್ಗೆ ಹಾಕಿ ಚನ್ನಾಗಿರುವ ಎಲೆಕೋಸಿಗಾಗಿ ಹುಡುಕಾಟ ನಡೆಸಿದರು.

ಕೊಳೆತು ಹೋಗಿರುವ ಬೆಳೆಯ ಮಧ್ಯೆ ಚನ್ನಾಗಿರುವ ಎಲೆಕೋಸುಗಳನ್ನು ಚೀಲದಲ್ಲಿ ತುಂಬಿಕೊಂಡು, ಕೈಯಲ್ಲಿ ಮೂರ್ನಾಲ್ಕು ಎತ್ತಿಕೊಂಡು ತಮ್ಮ ಮನೆಗಳಿಗೆ ಹೋದರು.

‘ಹೊಲದಲ್ಲಿ ಎಲೆಕೋಸು ಕೊಳೆತು ಮಣ್ಣಾಗುವ ಬದಲು ಗ್ರಾಮದ ಜನರಿಗಾದರೂ ಉಪಯೋಗಿಸಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡೆ’ ಎಂದು ರೈತ ಚಂದ್ರಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT