ಶನಿವಾರಸಂತೆ: ಭಾರತದಲ್ಲಿ ಕುಟುಂಬ ಸಂಗಮಕ್ಕೆ ಬಲಿಷ್ಠ ಶಕ್ತಿ ಇದೆ. ಕುಟುಂಬದ ಭಾವನೆಗಳನ್ನು ಇಂದಿನ ಕಾಲದಲ್ಲಿ ಉಳಿಸಬೇಕು ಎಂದು ಮಣಿಪಾಲ ನಿವೃತ್ತ ಪ್ರಾಧ್ಯಾಪಕ ಡಾ.ನಾರಾಯಣ ಶೆಣೈ ತಿಳಿಸಿದರು.

ಇಲ್ಲಿನ ನಂದೀಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಆಯೋಜಿಸಿದ ಹಿಂದೂ ಸಂಗಮ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಕುಟುಂಬದ ಮಕ್ಕಳನ್ನು ಯೋಗ್ಯತೆ ಸಂಸ್ಕೃತಿಯಿಂದ ಬೆಳೆಸಿ. ಮಕ್ಕಳಲ್ಲಿ ರಾಷ್ಟ್ರೀಯತೆ ಬಗ್ಗೆ ಗೌರವ ಭಾವನೆ ಮೂಡಿಸಿ ರಾಷ್ಟ್ರ ಪ್ರೇಮ ಬೆಳೆಸಬೇಕು. ಸಮಾಜದಲ್ಲಿ ಸಾಮರಸ್ಯ ಜೀವನ ಮಾಡಬೇಕಾಗಿದೆ. ಭಾರತಕ್ಕೆ ಪಶ್ಚಿಮಾತ್ಯ ದೇಶದಿಂದ ಬಂದು ನೆಲೆಸಿರುವ ಬಂಧುಗಳು ಹಿಂದೂ ಸಮಾಜದೊಂದಿಗೆ ಸಾಮರಸ್ಯ ಜೀವನ ಮಾಡುತ್ತಿದ್ದಾರೆ. ದೇಶದಲ್ಲಿ ಹಿಂದೂ ಸಮಾಜದಲ್ಲಿ ಜೀವನ ಮಾಡಲು ಹೆಮ್ಮೆ ಇದೆ ಎಂದರು.

ಭಾರತದಲ್ಲಿ ಸ್ವದೇಶಿ ವೇಷಭೂಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಯುವ ಪೀಳಿಗೆಗೆ ಸ್ವದೇಶಿ ವೇಷಭೂಷಣ ಉಪಯೋಗಿಸಲು ಪ್ರೇರಣೆ ನೀಡಬೇಕು. ನಮ್ಮ ಸುತ್ತಮುತ್ತಲ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಬೆಳೆಸಬೇಕು. ಪರಿಸರ ಪೋಷಣೆ ನಮ್ಮೆಲ್ಲರ ಕರ್ತವ್ಯ ಎಂದರು.

ಸುಪ್ರಜ ಗುರುಕುಲದ ಸ್ಥಾಪಕರಾದ ಸುಜಲದೇವಿ ಮಾತನಾಡಿ, ‘ಹಿಂದೂಗಳು ಸಮಾಜದಿಂದ ಭಾರತದ ರಕ್ಷಣೆ ಸಾಧ್ಯ. ಭಾರತದ ಸಾಮ್ರಾಜ್ಯವನ್ನು ಉಳಿಸಲು ಸ್ತ್ರೀಯರನ್ನು ಗೌರವದಿಂದ ಕಾಣಬೇಕು. ಭಾರತ ದೇಶವನ್ನು ಭಾರತ ಮಾತೇ ಎಂದು ನಾವು ಕರೆಯುತ್ತೇವೆ. ತನ್ನ ಭಾರತ ಮಾತೇಯ ತಾಯಿಯ ರಕ್ಷಣೆಗೆ ನಾವು ನಿಲ್ಲಬೇಕು ಎಂದು ಹೇಳಿದರು.

ಯುವ ಪೀಳಿಗೆಗೆ ಪಾಶ್ಚಿಮಾತ್ಯ ದೇಶದ ಒಲವು ಹೆಚ್ಚುತ್ತಿದೆ. ಭಾರತ ದೇಶದಲ್ಲಿ ಜೀವನ ಮಾಡುವ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಶನಿವಾರಸಂತೆ ಭಾರತೀ ವಿದ್ಯಾ ಸಂಸ್ಥೆ ಆವರಣದಿಂದ ಚಂಡೆ ವಾದ್ಯಗೋಷ್ಠಿಯೊಂದಿಗೆ ಭಾರತ ಮಾತೇ ಬೃಹತ್ ಫಲಕದೊಂದಿಗೆ ಶನಿವಾರಸಂತೆ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆ ನಂದೀಶ್ವರ ಕಲ್ಯಾಣ ಮಂಟಪದವರೆಗೆ ಸಾಗಿತ್ತು.

ಕಾರ್ಯಕ್ರಮ ನಿರ್ವಹಣೆಯನ್ನು ಮುಖಂಡ ಎಸ್.ಎನ್.ರಘು ನೆರವೇರಿಸಿದರು. ಯಶೋಧಾ ನೀಲಕಂಠಪ್ಪ, ರಕ್ಷಿತ್ ರವೀಂದ್ರ, ಶೇಷಾಚಲ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.