ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಬೈ ಮಿಲಾದ್ ಸಮಾವೇಶ: ಕೊಡಗಿನ ಕೆಎಂಎ ಪದಾಧಿಕಾರಿಗಳು ಭಾಗಿ

Published : 24 ಸೆಪ್ಟೆಂಬರ್ 2024, 14:03 IST
Last Updated : 24 ಸೆಪ್ಟೆಂಬರ್ 2024, 14:03 IST
ಫಾಲೋ ಮಾಡಿ
Comments

ಗೋಣಿಕೊಪ್ಪಲು: ‘ದುಬೈನಲ್ಲಿ ನಡೆದ ಮಿಲಾದ್ ಸಮಾವೇಶದಲ್ಲಿ ಕೊಡಗಿನ ಕೆಎಂಎ ಪದಾಧಿಕಾರಿಗಳಾದ ಸಖಾಫಿ ಕೊಂಡಂಗೇರಿ, ರಫೀಕ್ ಹಾಜಿ ಚಾಮಿಯಾಲ, ಇಬ್ರಾಹಿಂ ನಾಪೋಕ್ಲು, ಮುಜಮ್ಮಿಲ್ ಪಾಲಿಬೆಟ್ಟ, ಝಮೀರ್ ಬೆಂಗಳೂರು, ಕೆ.ಎಸ್.ಡಬ್ಲ್ಯೂ ಜುಬೈರ್ ಎಮ್ಮೆಮಾಡು, ಮುಜೀಬ್ ಕಡಂಗ, ನಿಸಾರ್ ಗುಂಡಿಕೆರೆ, ನಯಾಜ್ ನಾಪೋಕ್ಲು, ಅಶ್ರಫ್ ಕುಂಜಿಲ ಪಾಲ್ಗೊಂಡಿದ್ದರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ರಾಷ್ಟ್ರೀಯ ಸಮಿತಿಯಿಂದ ದುಬೈನ ದೇರಾದಲ್ಲಿ ಪ್ರವಾದಿ ಮುಹಮ್ಮದ್ ಜನ್ಮದಿನಾಚರಣೆ ಅಂಗವಾಗಿ ‘ವಿಶ್ವ ವಿಮೋಚನೆಯ ಹಾದಿ -ಪ್ರವಾದಿ’ ಎಂಬ ಧ್ಯೇಯವಾಕ್ಯದಲ್ಲಿ ಆಯೋಜಿಸಲಾಗಿದ್ದ ಮಿಲಾದ್ ಸಮಾವೇಶದಲ್ಲಿ ಮಾತನಾಡಿದ ಕೆಎಂಎ ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ, ‘ಇಸ್ಲಾಮಿನ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್‌ರ ಜೀವನವು ಒಂದು ತೆರೆದ ಪುಸ್ತಕವಾಗಿದೆ’ ಎಂದು ಹೇಳಿದರು.

‘ತಮ್ಮ ಖಾಸಗಿ ಬದುಕನ್ನು ಪರಿಶುದ್ಧವಾಗಿ, ಕುಟುಂಬ ಜೀವನವನ್ನು ಸುಭದ್ರವಾಗಿ, ಸಾಮಾಜಿಕ ಜೀವನವನ್ನು ಮಾದರಿಯಾಗಿಸಿದ ಪ್ರವಾದಿಯವರು ಜನರ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ’ ಎಂದರು.

‘ಕೊಡಗಿನ ಜನರು ಉದ್ಯೋಗ ಮತ್ತು ವ್ಯವಹಾರದ ಮೂಲಕ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ಬಂದು ಕಷ್ಟಪಟ್ಟು ದುಡಿದ ಆದಾಯದ ಒಂದು ಪಾಲನ್ನು ತಮ್ಮ ತಾಯಿನಾಡಿನ ಉನ್ನತಿಗಾಗಿ ಬಳಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT