ಕುಶಾಲನಗರ: ಇಲ್ಲಿನ ದುಬಾರೆ ಸಾಕಾನೆ ಶಿಬಿರದ ಕಾವೇರಿ ನದಿಯಲ್ಲಿ ಎರಡು ಕಾಡಾನೆಗಳ ನಡುವಿನ ಸಂಘರ್ಷದಲ್ಲಿ ತಮಿಳುನಾಡಿನಿಂದ ಬಂದಿದ್ದ ಮಹಿಳೆ ಜೋಯ್ಸಿ ಪ್ರಾಣ ಕಳೆದುಕೊಂಡ ಬಳಿಕ ಇಡೀ ಶಿಬಿರದಲ್ಲಿ ನೀರವ ಮೌನ ಆವರಿಸಿದೆ. ಜತೆಗೆ, ಪ್ರವಾಸಿಗರ ಸುರಕ್ಷತೆ ಬಗ್ಗೆಯೂ ಪ್ರಶ್ನೆಗಳು ಮೂಡುವಂತೆ ಮಾಡಿವೆ.

ಯಾವುದೇ ಗೊಂದಲ, ಗೋಜಲುಗಳು ಇಲ್ಲದೇ ಮದ ಏರದೇ ಇದ್ದ ಕಂಜನ್ ಆನೆ ಏಕಾಏಕಿ ಒಂದೈದು ನಿಮಿಷಗಳ ಕಾಲ ವ್ಯಗ್ರಗೊಂಡಿದ್ದು ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕಂಜನ್ ಆನೆ ದಂತದಿಂದ ಮನ ಬಂದಂತೆ ಚುಚ್ಚಿ ಗಾಯಗೊಳಿಸಿರುವ ಮಾರ್ತಾಂಡ ಆನೆ ಸ್ಥಿತಿ ಸಹ ಗಂಭೀರವಾಗಿಯೇ ಇದೆ. ವೈದ್ಯರು ಅದರ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಶಿಬಿರದಿಂದ ಪ್ರವಾಸಿಗರನ್ನು ಹೊರಕಳುಹಿಸಲಾಯಿತು. ಸ್ಥಳಕ್ಕೆ ಡಿಸಿಎಫ್ ಅಭಿಷೇಕ್, ವಲಯ ಅರಣ್ಯಾಧಿಕಾರಿ ರಕ್ಷಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿ ಪತಿಯ ರೋದನ: ಮೃತ ಮಹಿಳೆಯ ಪತಿ ಜೋಯಲ್ ಅವರ ರೋದನ ಮುಗಿಲು ಮುಟ್ಟಿತ್ತು. ಕುಶಾಲನಗರದ ಖಾಸಗಿ ಆಸ್ಪತ್ರೆಯಲ್ಲಿದ್ದ ಪತ್ನಿಯ ಮೃತದೇಹ ಮುಂದೆ ಕುಳಿತ ಅವರು ತನ್ನ ಮಗುವನ್ನು ತಬ್ಬಿ ಹಿಡಿದು ಬಿಕ್ಕಿ ಬಿಕ್ಕಿ ಅತ್ತರು.

ಮೊಬೈಲ್ ಮೂಲಕ ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸುತ್ತಾ ಅಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಜೋಯ್ಸಿ ಅವರಿಗೆ ಇಲ್ಲಿಗೆ ಬರಲು ಇಷ್ಟವೇ ಇರಲಿಲ್ಲ. ಮೈಸೂರಿನಿಂದ ಬರುವಾಗ ಮಾರ್ಗಮಧ್ಯೆ ವಾಂತಿ ಸಹ ಆಗಿತ್ತು. ವಾಪಸ್ ಹೋಗೋಣ ಎಂದು ಹೇಳುತ್ತಿದ್ದರು. ಜೊತೆಗೆ, ಅವರಿಗೆ ಆನೆ ಎಂದರೆ ಭಯವೂ ಇತ್ತು ಎಂದು ಅವರು ಹೇಳಿಕೊಳ್ಳುತ್ತಿದ್ದರು.

ಶಾಸಕ ಭೇಟಿ; ಮೃತ ಮಹಿಳೆಯ ಪತಿಗೆ ಸಾಂತ್ವನ: ದುಬಾರೆಯಲ್ಲಿ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ತಿಳಿದು ಶಾಸಕ ಡಾ.ಮಂತರ್ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ದುಬಾರೆ ನಡೆದ ಘಟನೆ ಬಗ್ಗೆ ಅತೀವ ನೋವು ವ್ಯಕ್ತಪಡಿಸಿದರು.

‘ಇಂತಹ ಘಟನೆ ನಮಗೆ ಎಚ್ಚರಿಕೆ ಗಂಟೆಯಾಗಿದೆ. ಪ್ರವಾಸಿಗರು ಭೇಟಿ ಸಂದರ್ಭ ಇಲಾಖೆ ಸಿಬ್ಬಂದಿಗಳು ಹಾಗೂ ಮಾವುತರು ಎಚ್ಚರಿಕೆ ವಹಿಸಬೇಕು. ಸಾಕಾನೆಗಳಿಂದ ಪ್ರವಾಸಿಗರು ಅಂತರ ಕಾಯ್ದುಕೊಳ್ಳಲು ಸಲಹೆ ನೀಡಬೇಕು’ ಎಂದರು.

ಅರಣ್ಯ ಇಲಾಖೆ ಮುಂದಿನ ಕ್ರಮ ಕೈಗೊಂಡು ಸೂಕ್ತ ಪರಿಹಾರ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಎಂ.ಪಿ.ಅಪ್ಪಚ್ಚುರಂಜನ್ ಸಾಂತ್ವನ: ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಕಾದಾಟದ ಸಂದರ್ಭ ಮೃತಪಟ್ಟ ಪ್ರವಾಸಿ ಮಹಿಳೆಯ ಮಗು ಹಾಗೂ ಕುಟುಂಬಸ್ಥರನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಸಂಜೆ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ಮಾಡಿ ಮಗುವಿನ ಯೋಗಕ್ಷೇಮ ವಿಚಾರಿಸಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-1050071551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.