ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌಷ್ಟಿಕ ಆಹಾರ ಸೇವಿಸಿ; ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ: ನೂರುನ್ನಿಸ

ಹಿರಿಯ ಸಿವಿಲ್ ನ್ಯಾಯಾಧೀಶೆ
Last Updated 26 ಮಾರ್ಚ್ 2021, 13:43 IST
ಅಕ್ಷರ ಗಾತ್ರ

ಮಡಿಕೇರಿ: ‘ಯಾಂತ್ರಿಕ ಯುಗದಲ್ಲಿ ಜನರು ಪೌಷ್ಟಿಕ ಅಹಾರ ಸೇವಿಸಲು ಮರೆಯುತ್ತಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನಿಸ ಅವರು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಬಾಲಬವನದಲ್ಲಿ ಈಚೆಗೆ ನಡೆದ ಪೋಷಣ್‌ ಅಭಿಯಾನ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಳ್ಳಿಗಳಲ್ಲಿ ಅತಿ ಹೆಚ್ಚಾಗಿ ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಿರುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಆರೋಗ್ಯದ ಅರಿವಿನ ಕೊರತೆ ಮತ್ತು ಅವರ ನಿರ್ಲಕ್ಷ್ಯ, ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನ ನಾವೇ ಸಾಂಕ್ರಾಮಿಕ ರೋಗವನ್ನು ಮೇಲೆ ಹಾಕಿಕೊಳ್ಳುವಂತಾಗುತ್ತದೆ’ ಎಂದು ನುಡಿದರು.

'ಪೌಷ್ಟಿಕ ಅಹಾರಕ್ಕೆ ಹಣದ ಒತ್ತಡ ಇಲ್ಲ; ಯಾಕೆಂದರೆ ನಮ್ಮ ಮನೆಯ ಸುತ್ತಮುತ್ತಲು ಸಿಗುವ ನೈಸರ್ಗಿಕ ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಸಾಕಾಗುತ್ತದೆ' ಎಂದು ತಿಳಿಸಿದರು.

ಕೃತಕ ವಸ್ತುಗಳ ಮೊರೆಹೋಗುವ ಚಟವನ್ನು ಬಿಟ್ಟು ಆರೋಗ್ಯಕರ ಪೌಷ್ಟಿಕ ಅಹಾರ ಸೇವನೆ ಮಾಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ವಿ.ನಿಂಗರಾಜಪ್ಪ ಮಾತನಾಡಿ, ಮಾನಸಿಕ, ದೈಹಿಕ, ಶಾರೀರಿಕ ಬೆಳವಣಿಗೆಗಳ ಕಡೆಗೆ ಅತಿ ಹೆಚ್ಚಾದ ಗಮನ ಹರಿಸಬೇಕಾಗುತ್ತದೆ. ದಿನನಿತ್ಯದ ಒತ್ತಡಗಳ ನಡುವೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂದರು.

ಹೊರಗೆ ಸಿಗುವ ಅಹಾರ ಸೇವನೆ ಬಿಟ್ಟು ಮನೆಯಲ್ಲಿ ಸಿಗುವ ಆಹಾರಕ್ಕೆ ಪೌಷ್ಟಿಕಾಂಶ ಸೇರಿಸಿ, ಸೇವಿಸುವುದು ಒಳಿತು ಎಂದು ತಿಳಿಸಿದರು.

ಹಿರಿಯ ಆರೋಗ್ಯಾಧಿಕಾರಿ ಡಾ.ಶ್ರೀನಾಥ್ ಮಾತನಾಡಿ, ಈ ನವ ಯುಗದಲ್ಲಿ ನಾವು ಅತಿ ಹೆಚ್ಚಾಗಿ ತಂತ್ರಜ್ಞಾನಕ್ಕೆ ಅವಲಂಬಿತರಾಗಿದ್ದೇವೆ. ಹಣ ಕೈಯಲ್ಲಿ ಇದ್ದರೆ ಎಲ್ಲವೂ ಹತ್ತಿರಕ್ಕೆ ಬರುತ್ತದೆ ಎಂಬ ಮನೋಭಾವವಿದ್ದು, ಇದರಿಂದ ಹೊರಬರಬೇಕು ಎಂದರು.

ಸ್ವಚ್ಛತೆಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ರೋಗಗಳು ನಮ್ಮ ಪಕ್ಕ ಸುಳಿಯುವುದಿಲ್ಲ ಎಂದು ಮಾರ್ಗದರ್ಶನ ನೀಡಿದರು.

ಜಿಲ್ಲಾ ಆಯುಷ್ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಸಹಾಯಕರು ಕಾವ್ಯಾ, ಜಿಲ್ಲಾ ನಿರೂಪಣಾಧಿಕಾರಿ ಸಿ.ಎ.ಅಣ್ಣಯ್ಯ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ರೆಹನಾ ಸುಲ್ತಾನ, ಜಿಲ್ಲಾ ವಿಕಲಚೇತನರ ಇಲಾಖೆ ಅಧಿಕಾರಿ ಸಂಪತ್ ಕುಮಾರ್, ಅಭಿಯಾನ ಯೋಜನೆ ಜಿಲ್ಲಾ ಸಂಯೋಜಕ ನಿತಿನ್ ಪಿ.ಬಿ. ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT