ಮೆಹಂದಿ ಸ್ಪರ್ಧೆ: ಅಂಗೈನಲ್ಲಿ ಮೂಡಿದ ಕಲಾತ್ಮಕ ಚಿತ್ತಾರ

7
ವಿರಾಜಪೇಟೆ: ಸೇಂಟ್‌ ಅನ್ನಮ್ಮ ಕಾಲೇಜಿನಲ್ಲಿ ಸ್ಪರ್ಧೆ

ಮೆಹಂದಿ ಸ್ಪರ್ಧೆ: ಅಂಗೈನಲ್ಲಿ ಮೂಡಿದ ಕಲಾತ್ಮಕ ಚಿತ್ತಾರ

Published:
Updated:
Deccan Herald

ವಿರಾಜಪೇಟೆ: ನೋಡುಗರ ಕಣ್ಮನ ಸೆಳೆಯುವ ವಿನ್ಯಾಸದ ಚಿತ್ರಾವಳಿಗಳು, ಕಲಾತ್ಮಕತೆಯಿಂದ ಕೂಡಿದ ಅಪೂರ್ವ ವಿನ್ಯಾಸಗಳು ಅಂಗೈನಲ್ಲಿ ಮೂಡಿದ ಕ್ಷಣವದು...

ಪಟ್ಟಣದ ಸೇಂಟ್‌ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಸ್ಟೂಡೆಂಟ್ ಆಕ್ಟಿವಿಟಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೆಹಂದಿ ಸ್ಪರ್ಧೆಯಲ್ಲಿ ಇಂತಹ ಸುಂದರ ದೃಶ್ಯಗಳು ಕಂಡು ಬಂದವು.

ಮದುವೆ ಮತ್ತಿತರ ಶುಭ ಸಮಾರಂಭದ ಭಾಗವಾಗಿ ಹೆಣ್ಣು ಮಕ್ಕಳ ಅಂಗೈನ ತುಂಬಾ ಮೆಹಂದಿ ಆವರಿಸಿಕೊಂಡಿರುತ್ತದೆ. ಕಾಲ ವೇಗವಾಗಿ ಬದಲಾಗುತ್ತಿದ್ದರೂ ಇಂದು ಕೂಡ ಮೆಹಂದಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಇದು ಹೆಣ್ಣು ಮಕ್ಕಳಿಗೆ ಮೆಹಂದಿಯ ಕುರಿತಿರುವ ವ್ಯಾಮೋಹವನ್ನು ಸೂಚಿಸುತ್ತದೆ. ಬದುಕಿನಲ್ಲಿ ಕೆಲವು ಕಾರ್ಯಕ್ರಮಗಳಂತೂ ಮೆಹಂದಿಯಿಲ್ಲ ಸಂಪೂರ್ಣವಾಗದು ಎಂಬಂತಿರುವುದು ಮಾನವನ ಬದುಕಿನ ಮೇಲೆ ಮೆಹಂದಿಯ ಪ್ರಭಾವವನ್ನು ಸೂಚಿಸುತ್ತದೆ.

ದೇಸಿ ಸೊಗಡನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಕಾಲೇಜಿನಲ್ಲಿ ಮೆಹಂದಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಬಾಲಕ ಬಾಲಕಿಯರೆಂಬ ಭೇದ ತೋರದೆ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕೆಲವು ವಿದ್ಯಾರ್ಥಿಗಳು ಸಿದ್ಧ ಮೆಹಂದಿಯನ್ನು ಅಂಗಡಿಯಿಂದ ಹಣ ತೆತ್ತು ತಂದಿದ್ದರೆ, ಮತ್ತೆ ಕೆಲವರು ತಾವೇ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದರು. ತಲಾ 2 ವಿದ್ಯಾರ್ಥಿಗಳನ್ನೊಳಗೊಂಡ ಸುಮಾರು 70 ತಂಡಗಳಲ್ಲಿ 140 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಮಾತ್ರ ವಿಶೇಷ. ತಂಡದ ವಿದ್ಯಾರ್ಥಿಯ ಅಂಗೈನಲ್ಲಿ ತಮ್ಮ ಕಲ್ಪನೆಯ ಚಿತ್ತಾರ ಮೂಡಿಸಲು 40 ನಿಮಿಷಗಳ ಸಮಯಾವಕಾಶ ನೀಡಲಾಗಿತ್ತು. ಸ್ಪರ್ಧೆಯಲ್ಲಿ ವಿನ್ಯಾಸ ಹಾಗೂ ಸೃಜನಾತ್ಮಕತೆಗೆ ಪ್ರಮುಖ ಆದ್ಯತೆ ನೀಡಲಾಯಿತು.

ಸ್ಪರ್ಧೆಯಲ್ಲಿ ಸ್ನೇಹಾ ಹಾಗೂ ಶಹನಾ ಮೊದಲ ಸ್ಥಾನ ಗಳಿಸಿದರೆ, ಫರಿಯಾ ಹಾಗೂ ಅಫೀಫಾ ಎರಡನೇ ಸ್ಥಾನ, ಶೀಫಾ, ಆಮೀರ ಮೂರನೇ ಸ್ಥಾನ ಗಳಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !