ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ವಸ್ಥ ವೃದ್ಧೆಗೆ ಅನಾಥಾಶ್ರಮದಲ್ಲಿ ಆಶ್ರಯ

ಮುಸ್ಲಿಂ ಮಹಿಳೆಯಿಂದ ಹಿಂದೂ ಮಹಿಳೆಗೆ ನೆರವು
Last Updated 7 ಡಿಸೆಂಬರ್ 2022, 9:33 IST
ಅಕ್ಷರ ಗಾತ್ರ

ಸುಂಟಿಕೊಪ್ಪ (ಕೊಡಗು ಜಿಲ್ಲೆ): ಗ್ರಾಮದಲ್ಲಿ ನೆಲೆ ಇಲ್ಲದೇ ಅಲೆಯುತ್ತಿದ್ದ‌‌ ಹಾಗೂ ಅಸ್ವಸ್ಥರಾಗಿದ್ದ ಸರಸು ಎಂಬ ಮಹಿಳೆಯನ್ನು ಸಫೀಯಾ ಎಂಬುವವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಬಳಿಕ ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಮೋರ್ಚಾ ಸದಸ್ಯೆ ಪವಿತ್ರ ರೈ ಅವರು ಸಾಮಾಜಿಕ ಕಾರ್ಯಕರ್ತ ಮುರುಗೇಶ್ ಅವರ ಮೂಲಕ ಸಮೀಪದ ತೊಂಡೂರು‌ ಗ್ರಾಮದಲ್ಲಿರುವ ವಿಕಾಸ್ ಜನ ಸೇವಾ ಟ್ರಸ್ಟ್‌ ಅಧ್ಯಕ್ಷ ರಮೇಶ್ ಮತ್ತು ಸಹ್ಯಾದ್ರಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ರೂಪಾ ಅವರ ನೆರವು ಪಡೆದು ‘ಜೀವನದಾರಿ’ ಆನಾಥಾಶ್ರಮದಲ್ಲಿ ವೃದ್ಧೆಗೆ ಆಶ್ರಯ ಕಲ್ಪಿಸಲಾಗಿದೆ.

ವೃದ್ಧೆಯ ಇಬ್ಬರು ಪುತ್ರಿಯರಿಗೆ ಮದುವೆಯಾಗಿದೆ. ಮಕ್ಕಳು ಮತ್ತು ಅಳಿಯಂದಿರು, ಮೊಮ್ಮಕ್ಕಳಿದ್ದರೂ ಅನಾಥವಾಗಿ ಅವರು ರಸ್ತೆ ಬದಿ, ಮಾರುಕಟ್ಟೆ, ಬಸ್‌ನಿಲ್ದಾಣಗಳಲ್ಲಿ ಮಲಗುತ್ತಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಆಲ್ಫ್ರೆಡ್ ಡಿಸೋಜ ರಕ್ಷಣೆಗೆ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT